ಕರ್ನಾಟಕ

karnataka

ETV Bharat / sports

ಅಮೆರಿಕಾ ಟಿ20 ಲೀಗ್​ನಲ್ಲಿ ಬಂಡವಾಳ ಹೂಡಲಿದೆ ಶಾರುಕ್ ಮಾಲೀಕತ್ವದ ನೈಟ್​ ರೈಡರ್ಸ್​.. ಯಾವ ತಂಡಕ್ಕೆ ಗೊತ್ತಾ? - ಮೇಜರ್​ ಕ್ರಿಕೆಟ್​ ಲೀಗ್

ಅಮೆರಿಕಾದ ಮೂಲದ ಟಿ20 ಕ್ರಿಕೆಟ್​ನ ಮೇಜರ್​ ಕ್ರಿಕೆಟ್​ ಲೀಗ್​(ಎಂಎಲ್​ಸಿ)ನಲ್ಲಿ ಫ್ರಾಂಚೈಸಿಯೊಂದಕ್ಕೆ ಶಾರೂಕ್ ಖಾನ್ ಮಾಲೀಕರಾಗಲಿದ್ದಾರೆ. ಇದೊಂದು ಮಲ್ಟಿ ಮಿಲಿಯನ್ ಡಾಲರ್​ ಟೂರ್ನಮೆಂಟ್​ ಆಗಿದ್ದು 2022ಕ್ಕೆ ಆರಂಭವಾಗುವ ನಿರೀಕ್ಷೆಯಿದೆ.

ಶಾರುಖ್ ಖಾನ್​
ಶಾರುಖ್ ಖಾನ್​

By

Published : Dec 1, 2020, 5:17 PM IST

ನವದೆಹಲಿ: ಐಪಿಎಲ್​ ಹಾಗೂ ಸಿಪಿಎಲ್​ನಲ್ಲಿ ಈಗಾಗಲೆ ತಂಡವನ್ನು ಹೊಂದಿರುವ ಬಾಲಿವುಡ್‌ನ ನಟ ಶಾರೂಕ್ ಖಾನ್ ಮತ್ತೊಂದು ಕ್ರಿಕೆಟ್​ ಲೀಗ್​ನಲ್ಲಿ ತಂಡದಲ್ಲಿ ಬಂಡವಾಳ ಹೂಡಿದೆ.

ಅಮೆರಿಕಾದ ಮೂಲದ ಟಿ20 ಕ್ರಿಕೆಟ್​ನ ಮೇಜರ್​ ಕ್ರಿಕೆಟ್​ ಲೀಗ್​(ಎಂಎಲ್​ಸಿ)ನಲ್ಲಿ ಫ್ರಾಂಚೈಸಿಯೊಂದಕ್ಕೆ ಶಾರೂಕ್ ಖಾನ್ ಮಾಲೀಕರಾಗಲಿದ್ದಾರೆ. ಇದೊಂದು ಮಲ್ಟಿ ಮಿಲಿಯನ್ ಡಾಲರ್​ ಟೂರ್ನಮೆಂಟ್​ ಆಗಿದ್ದು 2022ಕ್ಕೆ ಆರಂಭವಾಗುವ ನಿರೀಕ್ಷೆಯಿದೆ.

ಲಾಸ್ ಏಂಜಲೀಸ್ ತಂಡದ ಮಾಲೀಕತ್ವ ಶಾರೂಕ್ ಖಾನ್ ಹೊಂದಲಿದ್ದಾರೆ ಎಂದು ವರದಿಯಾಗಿದ್ದು. ನೈಟ್ ರೈಡರ್ಸ್ ಸಮೂಹವು ಎಂಎಲ್​ಸಿಯಲ್ಲಿ ಹೂಡಿಕೆ ಮಾಡುವ ಮೂಲಕ ಯುಎಸ್ಎ ಕ್ರಿಕೆಟ್ ಆರು ತಂಡಗಳ ಟಿ20 ಲೀಗ್​ಅನ್ನು ನಡೆಸಲು ಸಲಹೆಗಾರ ಪಾತ್ರವನ್ನು ನಿರ್ವಹಿಸಲಿದೆ. ಅಲ್ಲದೆ ಪಂದ್ಯಾವಳಿಯಲ್ಲಿ ಮಹತ್ವದ ಪಾಲನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.

ಮೇಜರ್​ ಕ್ರಿಕೆಟ್​ ಲೀಗ್​

ಯುಎಸ್‌ಎಯ ಈ ಕ್ರಿಕೆಟ್‌ ಲೀಗ್‌ನಲ್ಲಿ ಆರು ತಂಡಗಳು ಪಾಲ್ಗೊಳ್ಳಲಿದೆ. ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ವಾಷಿಂಗ್ಟನ್ ಡಿಸಿ, ಶಿಕಾಗೋ, ಡಲ್ಲಾಸ್ ಹಾಗೂ ಲಾಸ್ ಏಂಜಲೀಸ್ ನಗರಗಳನ್ನು ಪ್ರತಿನಿಧಿಸುವ ತಂಡಗಳು ಈ ಲೀಗ್‌ನಲ್ಲಿ ಇರಲಿದೆ. ಇದರಲ್ಲಿ ಲಾಸ್ ಏಂಜಲೀಸ್ ಮೂಲದ ತಂಡದ ಮಾಲೀಕತ್ವ ಶಾರೂಕ್ ಪಾಲಾಗಲಿದೆ ಎನ್ನಲಾಗಿದೆ.

ಈ ಕುರಿತು ನೈಟ್​ ರೈಡರ್ಸ್​ ಸಿಇಒ ವೆಂಕಿ ಮೈಸೂರು ಪ್ರತಿಕ್ರಿಯಿಸಿದ್ದು " ಅವರು ನಮ್ಮನ್ನು ಆಹ್ವಾನಿಸಿದಾಗ, ನಾವು ಇದರಲ್ಲಿ ಅಲ್ಪಾವಧಿಯ ದೃಷ್ಟಿಕೋನವನ್ನು ಹೊಂದಿಲ್ಲ, ದೀರ್ಘವಾಧಿಯಲ್ಲಿ ಧುಮುಕಲು ಬಯಸುವುದಾಗಿ ನಾವು ಹೇಳಿದ್ದೇವೆ " ಎಂದು ಅವರು ಹೇಳಿದ್ದಾರೆ.

ಅವರೂ ಕೂಡ ನಮ್ಮನ್ನು ಲೀಗ್‌ನ ಕೇವಲ ಒಂದು ತಂಡವಾಗುವುದರ ಹೊರತಾಗಿ ಅನೇಕ ವಿಧಗಳಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುವುದನ್ನ ಎದುರು ನೋಡುತ್ತಾರೆ. ಯುಎಸ್‌ನಲ್ಲಿ ಕ್ರಿಕೆಟ್‌ನ ಎಲ್ಲಾ ಅಂಶಗಳಿಗೆ ಸಹಾಯ ಮಾಡಲು ನಾವು ವಿಶಾಲವಾದ ಪಾತ್ರವನ್ನು ವಹಿಸಬೇಕೆಂದು ಅವರು ಬಯಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಈ ಟೂರ್ನಿ 2021ರ ಜುಲೈ 4ರಿಂದ ಆರಂಭವಾಗಬೇಕಿತ್ತು. ಆದರೆ ಕೋವಿಡ್ ಬಿಕ್ಕಟ್ಟಿನಿಂದ 2022ಕ್ಕೆ ಮುಂದೂಡಲ್ಪಟ್ಟಿದೆ.

ABOUT THE AUTHOR

...view details