ಮುಂಬೈ;ಭಾರತದ ತಂಡದಲ್ಲಿ ಸೀಮಿತ ಓವರ್ಗಳಲ್ಲಿ ಮಿಂಚುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ತಮ್ಮ ನೆಚ್ಚಿನ ಬ್ಯಾಟ್ಸ್ಮನ್ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ.
ಟೆಸ್ಟ್ ತಂಡದಲ್ಲಿ ಮೊದಲು ಅವಕಾಶಗಿಟ್ಟಿಕೊಂಡಿದ್ದ ರಾಹುಲ್ ಕಳಪೆ ಪ್ರದರ್ಶನದಿಂದ ತಂಡದಿಂದ ಹೊರಬಿದ್ದಿದ್ದರು. ಆದರೆ ಏಕದಿನ ಹಾಗೂ ಟಿ-20 ಯಲ್ಲಿ ಕಾಯಂ ಸದಸ್ಯರಾಗಿ ಮಿಂಚುತ್ತಿದ್ದಾರೆ.
ಕೊರೊನಾ ಲಾಕ್ಡೌನ್ ಇರುವುದರಿಂದ ಮನೆಯಲ್ಲೇ ಕಾಲಕಳೆಯುತ್ತಿರುವ ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇಂದು "#askkl? ಎಂಬ ಹ್ಯಾಸ್ ಟ್ಯಾಗ್ನಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳಲು ತಿಳಿಸಿದ್ದ ರಾಹುಲ್, ಅಭಿಮಾನಿ ಕೋರಿಕೆ ಮೇರೆಗೆ ತಮ್ಮ ನೆಚ್ಚಿನ ಬ್ಯಾಟ್ಸ್ಮನ್ ಯಾರು ಎಂದು ರಿವೀಲ್ ಮಾಡಿದ್ದಾರೆ. ರಾಹುಲ್ ಐಪಿಎಲ್ನಲ್ಲಿ ಜೊತೆಯಾಗಿ ಆರ್ಸಿಬಿಯಲ್ಲಿ ಆಡಿದ್ದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎವಿ ಡಿ ವಿಲಿಯರ್ಸ್ ಅವರನ್ನು ತಮ್ಮ ನೆಚ್ಚಿನ ಬ್ಯಾಟ್ಸ್ಮನ್ ಎಂದಿದ್ದಾರೆ.