ಮುಂಬೈ: ದೇಶಾದ್ಯಂತ ಕೊರೊನಾ ಲಾಕ್ಡೌನ್ ಇದ್ದು ಕ್ರಿಕೆಟ್ ಸಹ ಸ್ಥಗಿತಗೊಂಡಿದೆ. ಕ್ರಿಕೆಟಿಗರೆಲ್ಲಾ ಕುಟುಂಬದವರೊಡನೆ, ಸಾಮಾಜಿಕ ಜಾಲತಾಣದಲ್ಲಿ ಸಮಯ ಕಳೆಯುತ್ತಿದ್ದಾರೆ.
ಕನ್ನಡಿಗ ಕೆ ಎಲ್ ರಾಹುಲ್ ಮಾತ್ರ ಲಾಕ್ಡೌನ್ ನಡುವೆ ತಮ್ಮ ಫಿಟ್ನೆಸ್ ಕಡೆ ಗಮನ ನೀಡುತ್ತಿದ್ದು, ವರ್ಕೌಟ್ ಮಾಡುವಲ್ಲಿ ನಿರತರಾಗಿದ್ದಾರೆ.
28 ವರ್ಷದ ಕೆ ಎಲ್ ರಾಹುಲ್ ಇಂದು ತಮ್ಮ ಟ್ವಿಟ್ಟರ್ನಲ್ಲಿ ವರ್ಕೌಟ್ ಮಾಡುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ "ಎಂಡಿಂಗ್ ದ ವೀಕೆಂಡ್ ಸ್ಟ್ರಾಂಗ್" ಎಂಬ ಕ್ಯಾಪ್ಶನ್ ನೀಡಿದ್ದಾರೆ.
ವಿಡಿಯೋದಲ್ಲಿ ರಾಹುಲ್ , ಸಿಂಗಲ್ ಲೆಗ್ ಸ್ಕ್ವಾಂಟ್ಸ್, ಸೈದ್ ಜಂಪ್ಸ್, ಲಿಫ್ಟಿಂಗ್ ಡಂಬಲ್ಸ್ ಮತ್ತು ಪುಶ್ ಅಪ್ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ.
ಇತ್ತೀಚೆಗೆ ರಾಹುಲ್ ದುರ್ಬಲ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಅವೇರ್ ಸಂಸ್ಥೆಗೆ ದೇಣಿಗೆ ನೀಡಲು ತಮ್ಮ ವಿಶ್ವಕಪ್ ಬ್ಯಾಟ್, ಪ್ಯಾಡ್, ಹೆಲ್ಮೆಟ್ ಹಾಗೂ ಗ್ಲೌಸ್ಗಳನ್ನು ಹರಾಜಿಗಿಡುವ ಮೂಲಕ ಮಾನವೀಯತೆ ಮೆರೆದಿದ್ದರು.