ಹೈದರಾಬಾದ್:ಟೀಂ ಇಂಡಿಯಾದ ನೂತನ ಉಪನಾಯಕ, ಕನ್ನಡಿಗ ಕೆ.ಎಲ್.ರಾಹುಲ್, ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಆಥಿಯಾ ಶೆಟ್ಟಿ ಜನ್ಮ ದಿನಕ್ಕೆ ಶುಭಾಶಯ ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ರಾಹುಲ್ ಹಂಚಿಕೊಂಡಿರುವ ಫೋಟೋ ನೋಡಿದ ಅಭಿಮಾನಿಗಳು ಇಬ್ಬರು ಲವ್ ಬರ್ಡ್ಸ್ಗಳು ಎಂದು ಕಾಮೆಂಟ್ ಮಾಡ್ತಿದ್ದಾರೆ.
ಅಥಿಯಾ ಶೆಟ್ಟಿ ಜನ್ಮದಿನಕ್ಕೆ ಶುಭ ಕೋರಿದ ರಾಹುಲ್: ಗೆಳತಿ ಜೊತೆಗಿನ ಕ್ಯೂಟ್ ಫೋಟೋಗೆ ಅಭಿಮಾನಿಗಳು ಬೌಲ್ಡ್ - ಗೆಳತಿಗೆ ಜನ್ಮದಿನದ ಶುಭಾಶಯ ತಿಳಿಸಿದ ರಾಹುಲ್
ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಆಥಿಯಾ ಶೆಟ್ಟಿ ಜನ್ಮ ದಿನಕ್ಕೆ ಶುಭಾಶಯ ತಿಳಿಸಿರುವ ಕನ್ನಡಿಗ ಕೆ.ಎಲ್.ರಾಹುಲ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಗೆಳತಿ ಜೊತೆಗಿನ ಕ್ಯೂಟ್ ಫೋಟೋ ಪೋಸ್ಟ್ ಮಾಡಿದ್ದಾರೆ
ಅಥಿಯಾ ಶೆಟ್ಟಿ ಜನ್ಮದಿನಕ್ಕೆ ಶುಭ ಕೋರಿದ ರಾಹುಲ್
ಅಥಿಯಾ, ಗುರುವಾರ 28ನೇ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅಥಿಯಾ ಜೊತೆಗಿನ ಫೋಟೋ ಪೋಸ್ಟ್ ಮಾಡಿದ್ದ ಕೆ.ಎಲ್ ರಾಹುಲ್, 'ಹ್ಯಾಪಿ ಬರ್ತ್ಡೇ ಮ್ಯಾಡ್ ಚೈಲ್ಡ್' ಎಂದಿದ್ದಾರೆ. ರಾಹುಲ್ ಪೋಸ್ಟ್ಗೆ ಹಲವು ಅಭಿಮಾನಿಗಳು ಇಬ್ಬರು ಪಕ್ಕಾ ಲವ್ ಬರ್ಡ್ಸ್ ಅಂತ ಕಮೆಂಟ್ ಮಾಡ್ತಿದ್ದಾರೆ.
ಈ ಹಿಂದೆ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ರಾಹುಲ್ ಮತ್ತು ಅಥಿಯಾ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದವು. ಆದ್ರೆ ತಮ್ಮ ರಿಲೇಶನ್ಶಿಪ್ ಬಗ್ಗೆ ರಾಹುಲ್ ಆಗಲಿ ಅಥಿಯಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
Last Updated : Nov 6, 2020, 10:25 AM IST