ಹೈದರಾಬಾದ್: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಈಗಾಗಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಕುರಿತಾಗಿ ಮಾಜಿ/ ಹಾಲಿ ಕ್ರಿಕೆಟರುಗಳು, ಸೆಲೆಬ್ರೆಟಿಗಳು ಹಾಗೂ ರಾಜಕಾರಣಿಗಳು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಾಹಿ ದಿಢೀರ್ ನಿವೃತ್ತಿ ತೆಗೆದುಕೊಂಡಿರುವ ಸುದ್ದಿ ಕೇಳಿ ಅರೆಕ್ಷಣ ಎದೆ ಒಡೆದಂತಾಯಿತು ಎಂದು ಕ್ರಿಕೆಟಿಗ ಕೆ.ಎಲ್.ರಾಹುಲ್ ಹೇಳಿದ್ದಾರೆ. ಕ್ರಿಕ್ ಇನ್ಫೋ ಜತೆ ಸಂವಾದ ನಡೆಸುತ್ತಿದ್ದ ವೇಳೆ ತಮ್ಮ ಮನದಾಳ ಹಂಚಿಕೊಂಡರು.
ವಿಶ್ವಕಪ್ ಪಂದ್ಯವೊಂದರ ವೇಳೆ ಎಂ.ಎಸ್.ಧೋನಿ ಅವರು (ಧೋನಿ) ಕೊನೆಯದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ನಿವೃತ್ತಿ ಘೋಷಣೆ ಬಗ್ಗೆ ಮಾಹಿತಿ ನೀಡಿದ್ದಿದ್ದರೆ, ಖಂಡಿತವಾಗಿಯೂ ನಾವು ದೊಡ್ಡ ಮಟ್ಟದಲ್ಲಿ ಫೇರ್ವೆಲ್ ಪಾರ್ಟಿ ನೀಡುತ್ತಿದ್ದೇವು ಎಂದು ಅವರು ತಿಳಿಸಿದ್ದಾರೆ.
ಧೋನಿ, ರೈನಾ ಹಾಗು ಇನ್ನಿತರ ಕ್ರಿಕೆಟಿಗರ ಜತೆ ಕೆ.ಎಲ್.ರಾಹುಲ್ ತಂಡದಲ್ಲಿದ್ದಾಗ ಧೋನಿ ಎಲ್ಲ ಯುವ ಕ್ರಿಕೆಟರಿಗರಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡುತ್ತಿದ್ದರು. ನಾವು ಮಾಡುತ್ತಿದ್ದ ತಪ್ಪುಗಳಿಂದ ತಿದ್ದಿಕೊಳ್ಳಲು ಹತ್ತಾರು ಸಲ ನಾವಿರುವ ಸ್ಥಳಕ್ಕೆ ಬಂದು ಸಲಹೆ ನೀಡಿದ್ದಾರೆ ಎಂದು ರಾಹುಲ್ ನೆನಪಿಸಿದರು. ಧೋನಿ ಅನುಪಸ್ಥಿತಿಯಲ್ಲಿ ಅನೇಕ ಸಲ ಟೀಂ ಇಂಡಿಯಾ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಿರುವ ರಾಹುಲ್, ಮುಂದಿನ ದಿನಗಳಲ್ಲಿ ವಿಕೆಟ್ ಕೀಪಿಂಗ್ ಜತೆ ಆರಂಭಿಕ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಪಂದ್ಯವೊಂದರ ವೇಳೆ ಪಂಜಾಬ್ ತಂಡದ ಹಡಲ್ ದುಬೈನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಲು ಈಗಾಗಲೇ ತಯಾರಿ ನಡೆಸುತ್ತಿರುವ ರಾಹುಲ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಕನ್ನಡಿಗನ ಪಾಲಿಗೆ ಒಲಿದ ಮೊದಲ ನಾಯಕತ್ವದ ಜವಾಬ್ದಾರಿ ಇದಾಗಲಿದೆ.
13ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ.