ಮುಂಬೈ: ಐಪಿಎಲ್ನಲ್ಲಿ ತಮ್ಮ ಸುಪ್ರೀಂ ಫಾರ್ಮ್ನಲ್ಲಿರುವ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ತಲುಪಿದ್ದಾರೆ.
ಇಂದಿನ ಪಂದ್ಯದಲ್ಲಿ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರಾಹುಲ್ 56 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 91 ರನ್ಗಳಿಸಿದ್ದರು. ಈ ವೇಳೆ ಗೇಲ್(40) ಜೊತೆ ಅರ್ಧಶತಕ ಜೊತೆಯಾಟ ನಡೆಸಿದ ರಾಹುಲ್ 3ನೇ ವಿಕೆಟ್ಗೆ ದೀಪಕ್ ಹೂಡಾ(64) ಜೊತೆಗೆ 105ರನ್ ಸೇರಿಸಿ 221ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.
28 ವರ್ಷದ ಕರ್ನಾಟಕ ಬ್ಯಾಟ್ಸ್ಮನ್ ಪಂಜಾಬ್ ತಂಡದ ಪರ 2000ರನ್ ಪೂರೈಸಿದರು. ಈ ಮೂಲಕ ಶಾನ್ ಮಾರ್ಷ್ ನಂತರ ಪಂಜಾಬ್ ಪರ ಈ ಸಾಧನೆ ಮಾಡಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.