ಕರ್ನಾಟಕ

karnataka

ETV Bharat / sports

ಸಿಂಹದ ಮುಖ ಹೋಲುವ 'ಸಿಂಬಾ' ಜೊತೆ ಫೋಟೋ ಹಂಚಿಕೊಂಡ ಕೆ.ಎಲ್.ರಾಹುಲ್​ - KL rahul shares simba pick

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ, ಪಾಂಡ್ಯ ಸಹೋದರರು, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶ್ವಾನ ಪ್ರೇಮಿಗಳಾಗಿದ್ದು, ವಿದೇಶಿ ತಳಿಯ ಚೌ ಚೌ ನಾಯಿ ಹೊಂದಿದ್ದಾರೆ. ನೋಡಲು ಸಿಂಹದ ಮುಖವನ್ನು ಹೋಲುವ ಈ ಶ್ವಾನದ ಜೊತೆ ರಾಹುಲ್ ಆಗಿಂದಾಗ್ಗೆ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಕೆಎಲ್ ರಾಹುಲ್
ಕೆಎಲ್ ರಾಹುಲ್

By

Published : Mar 3, 2021, 7:26 PM IST

ಮುಂಬೈ: ಭಾರತ ತಂಡದ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್ ಕೆ.ಎಲ್.ರಾಹುಲ್ ಶ್ವಾನ ಪ್ರೇಮಿಯಾಗಿದ್ದು, ತಮ್ಮ ಚೌ ಚೌ ತಳಿಯ 'ಸಿಂಬಾ' ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಟ್ವಿಟರ್​ನಲ್ಲಿ ತಮ್ಮ ಮುದ್ದಿನ ನಾಯಿಯೊಂದಿಗೆ ಪಾರ್ಟಿ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, 'ಪಾವ್ರಿ(ಪಾರ್ಟಿ) ಆಫ್​ ಟು' ಎಂದು ಬರೆದುಕೊಂಡಿದ್ದಾರೆ.

ಪೆಟ್​ ಲವರ್​ ಆಗಿರುವ ರಾಹುಲ್​ ಲಾಕ್​ಡೌನ್​ ಸಂದರ್ಭದಲ್ಲಿ ಸಿಂಬಾ ಜೊತೆಗೆ ಸಾಕಷ್ಟು ಸಮಯ ಕಳೆದಿದ್ದಾರೆ. ಮುದ್ದಿನ ನಾಯಿಯೊಂದಿಗೆ ಅವರು ಹೊಂದಿರುವ ಬಾಂಧವ್ಯ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ABOUT THE AUTHOR

...view details