ಕರ್ನಾಟಕ

karnataka

ETV Bharat / sports

ಕೆ.ಎಲ್‌.ರಾಹುಲ್‌ ಸತತ ಬ್ಯಾಟಿಂಗ್‌ ವೈಫಲ್ಯ: ನಾಲ್ಕು ಇನ್ನಿಂಗ್ಸ್​​ನಲ್ಲಿ 3 ಸಲ ಶೂನ್ಯಕ್ಕೆ ಔಟ್​ - ಶೂನ್ಯ ಸಂಪಾದಿಸಿದ ಕೆ.ಎಲ್ ರಾಹುಲ್​

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಉತ್ತಮ ದಾಖಲೆ ಹೊಂದಿರುವ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಇದೇ ಮೊದಲ ಸಲ ಸತತ ವೈಫಲ್ಯಕ್ಕೊಳಗಾಗಿದ್ದಾರೆ.

KL Rahul
KL Rahul

By

Published : Mar 16, 2021, 8:08 PM IST

ಅಹಮದಾಬಾದ್​: ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಐದು ಟಿ-20 ಪಂದ್ಯಗಳ ಮೂರನೇ ಟಿ-20 ಪಂದ್ಯದಲ್ಲಿ ಕನ್ನಡಿಗ, ಆರಂಭಿಕ ಆಟಗಾರ ಕೆ.ಎಲ್​.ರಾಹುಲ್​ ಮತ್ತೊಮ್ಮೆ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದು, ತಾವು ಎದುರಿಸಿದ ನಾಲ್ಕು ಎಸೆತಗಳಲ್ಲಿ ಶೂನ್ಯ ಸಂಪಾದನೆ ಮಾಡಿ ವಿಕೆಟ್ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಭಾರತ vs ಇಂಗ್ಲೆಂಡ್ 3ನೇ ಟಿ20: ಟಾಸ್​ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ, ಹಿಟ್​ಮ್ಯಾನ್ ಕಣಕ್ಕೆ​

ರೋಹಿತ್​ ಶರ್ಮಾ ಜೊತೆ ಸೇರಿ ಇನ್ನಿಂಗ್ಸ್​ ಆರಂಭಿಸಿದ ರಾಹುಲ್​​, ಮಾರ್ಕ್‌ವುಡ್​ ಬೌಲಿಂಗ್​ನಲ್ಲಿ ಕ್ಲೀನ್​ ಬೌಲ್ಡ್​ ಆದರು. ಇದರ ಜತೆಗೆ ಕಳೆದ ನಾಲ್ಕು ಟಿ-20 ಪಂದ್ಯಗಳಲ್ಲಿ ಮೂರನೇ ಸಲ ಶೂನ್ಯಕ್ಕೆ ಔಟ್‌ ಆದರು. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಅವರು ಯಾವುದೇ ರನ್‌ ಗಳಿಸಲಿಲ್ಲ. ಇದೀಗ ಇಂಗ್ಲೆಂಡ್​ ವಿರುದ್ಧದ ಮೂರು ಟಿ-20 ಪಂದ್ಯಗಳಿಂದ ಕೇವಲ 1ರನ್​ಗಳಿಕೆ ಮಾಡಿದ್ದಾರೆ. ವಿಶೇಷವೆಂದರೆ, 119 ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳ ವೃತ್ತಿ ಜೀವನದಲ್ಲಿ ಕೆ.ಎಲ್​ ರಾಹುಲ್​ ಇದೇ ಮೊದಲ ಸಲ ಸತತ ವೈಫಲ್ಯಕ್ಕೊಳಗಾಗಿದ್ದಾರೆ.

ಈ ಹಿಂದೆ ರೋಹಿತ್​ ಶರ್ಮಾ ಆರು ಟಿ20 ಪಂದ್ಯಗಳಲ್ಲಿ ಇದೇ ರೀತಿಯ ಕಳಪೆ ಪ್ರದರ್ಶನ ಮಾಡಿದ್ದರು. ಜತೆಗೆ ವಿರಾಟ್​ ಕೊಹ್ಲಿ ಕೂಡ ಟಿ-20ಯಲ್ಲಿ ಮೂರು ಸಲ ಸತತವಾಗಿ ವೈಫಲ್ಯ ಅನುಭವಿಸಿದ್ದಾರೆ.

ABOUT THE AUTHOR

...view details