ಮುಂಬೈ :ಭಾರತ ತಂಡದಲ್ಲಿ ಎಲ್ಲ ಕ್ರಮಾಂಕದಲ್ಲೂ ಸೈ ಎನಿಸಿಕೊಳ್ಳುತ್ತಿರುವ ಕನ್ನಡಿಗ ಕೆ ಎಲ್ ರಾಹುಲ್ ನೂತನವಾಗಿ ಬಿಡುಗಡೆಯಾಗಿರುವ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಬರೋಬ್ಬರಿ 35ಸ್ಥಾನ ಏರಿಕೆ ಕಂಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಸರಣಿಯಲ್ಲಿ 88, 4 ಹಾಗೂ112 ರನ್ಗಳಿಸಿದ್ದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯಗಳಿಂದ 47, 80 ಹಾಗೂ 19 ರನ್ಗಳಿಸಿದ್ದರು. ಈ ಎರಡು ಸರಣಿಗಳಲ್ಲಿ ನೀಡಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ರಾಹುಲ್ 35 ಸ್ಥಾನ ಏರಿಕೆ ಕಂಡು 36ನೇ ಸ್ಥಾನದಲ್ಲಿದ್ದಾರೆ.