ಬೆಂಗಳೂರು:ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೇ ಕಾರ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ ಅರ್ಪಣ ಮಾನೋಭಾವ ಹಾಗೂ ಅಚಲ ಮನೋಭಾವಕ್ಕೆ ಕ್ರಿಕೆಟಿಗ ಕೆಎಲ್ ರಾಹುಲ್ ಧನ್ಯವಾದ ಹೇಳಿದ್ದಾರೆ.
ದೇಶವೇ ಸಂಕಷ್ಟಕ್ಕೀಡಾಗಿರುವ ಈ ಸಂದರ್ಭದಲ್ಲಿ ದಿನದ 24 ಗಂಟೆಯೂ ತಮ್ಮ ಹಾಗೂ ಕುಟುಂಬದವರ ಜೀವವನ್ನು ಪಣಕ್ಕಿಟ್ಟು ಕ್ರೂರಿ ಕೊರೊನಾ ವಿರುದ್ಧ ವೈದ್ಯರು, ಪೊಲೀಸರು ನರ್ಸ್ಗಳು, ಆಶಾ ಕಾರ್ಯಕರ್ತರು ಸೇರಿದಂತೆ ಲಕ್ಷಾಂತರ ಮಂದಿ ಹೋರಾಡುತ್ತಿದ್ದಾರೆ.
ಭಾರತ ತಂಡದ ಕ್ರಿಕೆಟಿಗ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಇತರ ಅರೋಗ್ಯ ಸೇವೆ ಸಿಬ್ಬಂದಿಗೆ ಪೂಮಾ ಶೂಗಳನ್ನು ಕೊಡುಗೆಯಾಗಿ ನೀಡಿ ಹೃತ್ಫೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಎಲ್ಲ ಅಪಾಯವನ್ನು ಮೆಟ್ಟಿನಿಂತು ನಮ್ಮ ದೇಶದ ಹಿತಕ್ಕೋಸ್ಕರ ದುಡಿಯುತ್ತಿರುವ ನಿಮಗೆ ಧನ್ಯವಾದಗಳು. ನಿಮ್ಮ ಕಾರ್ಯಕ್ಕೆ ನೀವು ದೇಶದ ಜನತೆಯಿಂದ ಮೆಚ್ಚುಗೆ ಪಡೆದಿದ್ದೀರಿ ಎಂದು ತಿಳಿಸಲು ಇದೊಂದು(ಶೂಗಳನ್ನು ದೇಣಿಗೆ ನೀಡಿರುವುದು) ಕೃತಜ್ಞತೆ ಹಾಗೂ ಗೌರವದ ಸಂಕೇತವಾಗಿದೆ. ನಿಮ್ಮ ಒಳ್ಳೆಯ ಹೋರಾಟವನ್ನು ಮುಂದುವರಿಸಿ, ಧನ್ಯವಾದಗಳು," ಎಂದು ರಾಹುಲ್ ತಿಳಿಸಿದ್ದಾರೆ.
ಕನ್ನಡಿಗ ಕೆಎಲ್ ರಾಹುಲ್ 2019ರ ವಿಶ್ವಕಪ್ನಲ್ಲಿ ಬಳಸಿದ್ದ ಬ್ಯಾಟ್, ಪ್ಯಾಡ್, ಹೆಲ್ಮೆಟ್ ಹಾಗೂ ಗ್ಲೌಸ್ಗಳನ್ನು ಹರಾಜಿಗಿಟ್ಟು ಸುಮಾರು 9 ಲಕ್ಷ ದೇಣಿಗೆ ಸಂಗ್ರಹಿಸಿ ದುರ್ಬಲ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಎನ್ಜಿಒಗೆ ನೀಡಿದ್ದರು.