ದುಬೈ:ನಾಯಕ ಕೆಎಲ್ ರಾಹುಲ್ ಸಿಡಿಸಿದ ಅರ್ಧಶತಕದ ಬಲದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 178 ರನ್ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡಕ್ಕೆ ಅದ್ಭುತ ಫಾರ್ಮ್ನಲ್ಲಿರುವ ರಾಹುಲ್-ಮಯಾಂಕ್ ಜೋಡಿ ಮೊದಲ ವಿಕೆಟ್ಗೆ 61 ರನ್ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಮಯಾಂಕ್ ದೊಡ್ಡ ಹೊಡೆತಕ್ಕೆ ಕೈಯಾಕಿ ಚಾವ್ಲಾಗೆ ವಿಕೆಟ್ ನೀಡಿದರು.
ನಂತರ ಬಂದ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಂದೀಪ್ ಸಿಂಗ್ 16 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 27 ರನ್ಗಳಿಸಿ ಔಟಾದರು. ನಂತರ ನಾಯಕನ ಜೊತೆ ಸೇರಿದ ನಿಕೋಲಸ್ ಪೂರನ್ 17 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 33 ರನ್ಗಳಿಸಿ ಔಟಾದರು.