ದುಬೈ: ನಾಯಕ ಕೆಎಲ್ ರಾಹುಲ್ ಅಬ್ಬರದ ಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರ್ಸಿಬಿ ವಿರುದ್ಧ 206 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ತಂಡ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 206ರನ್ಗಳ ಮೊತ್ತ ದಾಖಲಿಸಿದೆ.
ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಜೊತೆ ಸೇರಿ ಮೊದಲ ವಿಕೆಟ್ಗೆ 57 ರನ್ಗಳ ಜೊತೆಯಾಟ ನೀಡಿದರು. 20 ಎಸೆತಗಳಲ್ಲಿ 4 ಬೌಂಡರಿ ಸಹಿತ 26 ರನ್ಗಳಿಸಿದ್ದ ಮಯಾಂಕ್ ಚಹಾಲ್ ಬೌಲಿಂಗ್ನಲ್ಲಿ ವಿಕೆಟ್ ಬೌಲ್ಡ್ ಆದರು.
ಮಯಾಂಕ್ ಔಟಾದ ನಂತರವೂ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ ರಾಹುಲ್ 2ನೇ ವಿಕೆಟ್ ಜೊತೆಯಾಟದಲ್ಲಿ ಪೂರನ್ ಜೊತೆ ಸೇರಿ 57 ರನ್ಗಳ ಸೇರಿಸಿದರು. ನಿಧಾನಗತಿ ಬ್ಯಾಟಿಂಗ್ ಪ್ರದರ್ಶನ ತೋರಿದ ಪೂರನ್ 18 ಎಸೆತಗಳಲ್ಲಿ 17 ರನ್ಗಳಿಸಿ ಔಟಾದರು. ನಂತರ ಬಂದ ಮ್ಯಾಕ್ಸ್ವೆಲ್ 5 ರನ್ಗಳಿಗೆ ಔಟಾಗುವ ಮೂಲಕ ಮತ್ತೊಮ್ಮೆ ವಿಫಲರಾದರು.
ಕೊನೆಯವರೆಗೂ ತನ್ನ ಸ್ಫೋಟಕ ಬ್ಯಾಟಿಂಗ್ ಮುಂದುರಿಸಿದ ರಾಹುಲ್ 69 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 14 ಬೌಂಡರಿ ಸಹಿತ 132 ರನ್ಗಳಿಸಿ ಔಟಾಗದೇ ಉಳಿದರು. ಈ ಮೂಲಕ ಐಪಿಎಲ್ನಲ್ಲಿ ತಮ್ಮ 2ನೇ ಶತಕ ದಾಖಲಿಸಿದರು. ಇವರು ಕೊನೆಯ ವಿಕೆಟ್ಗೆ ಕರುಣ್ ನಾಯರ್ ಜೊತೆಗೂಡಿ ಕೇವಲಕೊನೆಯ 28 ಎಸೆತಗಳಲ್ಲಿ 84 ರನ್ ಚಚ್ಚಿದರು, ಇದರಲ್ಲಿ ನಾಯರ್ ಪಾಲು ಕೇವಲ 8 ರನ್.