ಪುಣೆ(ಮಹಾರಾಷ್ಟ್ರ): ಕರ್ನಾಟಕದ ಕುವರ ಕೆ.ಎಲ್.ರಾಹುಲ್ ಅದ್ಭುತ ಫಾರ್ಮ್ ಕಂಡುಕೊಂಡಿದ್ದು, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 5ನೇ ಶತಕ ದಾಖಲಿಸಿದರು. ಈ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಅವರು ನಿರ್ಣಾಯಕ ಪಾತ್ರ ನಿರ್ವಹಿಸಿದರು.
108 ಎಸೆತಗಳಲ್ಲಿ ರಾಹುಲ್ ಶತಕ ಬಾರಿಸಿದ್ದು, ಹಿಂದಿನ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದರು. ಏಕದಿನ ಪಂದ್ಯಗಳಲ್ಲಿ ಐದನೇ ಶತಕ ದಾಖಲಿಸಿರುವ ರಾಹುಲ್ ಬಳಿಕ ಟಾಮ್ ಕುರ್ರಾನ್ ಎಸೆತದಲ್ಲಿ ರೀಸ್ ಟೋಪ್ಲೆಗೆ ಕ್ಯಾಚಿತ್ತು ಪೆವಿಲಿಯನ್‌ಗೆ ತೆರಳಿದರು.
ರಾಹುಲ್ಗೆ ರಿಷಬ್ ಪಂತ್ ಅದ್ಭುತ ಜೊತೆಯಾಟ ನೀಡಿದ್ದು, ಭರ್ಜರಿ ಅರ್ಧಶತಕ ಪೇರಿಸಿದರು. ಕೇವಲ 34 ಎಸೆತಗಳಲ್ಲಿ 63 ರನ್ ಗಳಿಸಿರುವ ಪಂಥ್ಗೆ ಇದೀಗ ಹಾರ್ದಿಕ್ ಪಾಂಡ್ಯ ಜೊತೆಯಾಗಿದ್ದಾರೆ.
ಇನ್ನು ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ 79 ಎಸೆತಗಳಲ್ಲಿ 66 ರನ್ ದಾಖಲಿಸಿದರು. ಬಳಿಕ ಆದಿಲ್ ರಶೀದ್ ಬೌಲಿಂಗ್ನಲ್ಲಿ ಜಾಸ್ ಬಟ್ಲರ್ಗೆ ಕ್ಯಾಚ್ ನೀಡಿದರು. ರೋಹಿತ್ ಶರ್ಮಾ 25 ಎಸೆತಗಳಲ್ಲಿ 25 ರನ್ಗಳಿಸಿ ಸ್ಯಾಮ್ ಕುರ್ರಾನ್ ಎಸೆತದಲ್ಲಿ ಔಟ್ ಆದರು. ಶಿಖರ್ ಧವನ್ 17 ಎಸೆತಗಳಲ್ಲಿ ರೀಸ್ ಟೋಪ್ಲೆ ಬೌಲಿಂಗ್ನಲ್ಲಿ ಬೆನ್ಸ್ಟೋಕ್ಗೆ ಕ್ಯಾಚ್ ಒಪ್ಪಿಸುವ ಮೂಲಕ ಪೆವಿಲಿಯನ್‌ಗೆ ಮರಳಿದರು.
ಇದೀಗ ಬಂದಿರುವ ಮಾಹಿತಿಯಂತೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 46 ಓವರ್ಗಳಲ್ಲಿ 301 ರನ್ ಗಳಿಸಿದೆ.