ಮೌಂಗನ್ಯುಯಿ: ಕನ್ನಡಿಗ ಕೆಎಲ್ ರಾಹುಲ್ ಕಿವೀಸ್ ವಿರುದ್ಧದ 3ನೇ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ 21 ವರ್ಷಗಳ ಬಳಿಕ ಏಷ್ಯಾದಿಂದಾಚೆಗೆ ಶತಕ ಸಾಧನೆ ಮಾಡಿದ ಎರಡನೇ ಭಾರತೀಯ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.
ಭಾರತ ತಂಡ ಈಗಾಗಲೇ ಏಕದಿನ ಸರಣಿ ಕಳೆದುಕೊಂಡಿದೆ. ಆದರೆ, ಮೂರನೇ ಪಂದ್ಯ ಗೆದ್ದು ಕ್ಲೀನ್ಸ್ವೀಪ್ ಅಪಮಾನದಿಂದ ತಪ್ಪಿಸಿಕೊಳ್ಳಬೇಕಾಗಿರುವುದರಿಂದ ಈ ಪಂದ್ಯ ಮಹತ್ವದಾಗಿದ್ದ ಪಂದ್ಯದಲ್ಲಿ ರಾಹುಲ್ ಶತಕ ಸಿಡಿಸಿ ಭಾರತದ ಪಾಲಿಗೆ ಆಪತ್ಪಾಂದವರಾಗಿದ್ದಾರೆ. ರಾಹುಲ್ 113 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 9 ಬೌಂಡರಿ ಸಹಿತ 112 ರನ್ಗಳಿಸಿ ತಮ್ಮ ಏಕದಿನ ಕ್ರಿಕೆಟ್ನ 4ನೇ ಶತಕ ಪೂರ್ಣಗೊಳಿಸಿದರು.
1999ರ ವಿಶ್ವಕಪ್ನಲ್ಲಿ ವಿಶ್ವದಾಖಲೆ ಜೊತೆಯಾಟ ನಡೆಸಿದ್ದ ದ್ರಾವಿಡ್ ಹಾಗೂ ಗಂಗೂಲಿ ಅಲದೆ 21 ವರ್ಷಗಳ ಬಳಿಕ ಭಾರತ ಪರ ವಿಕೆಟ್ ಕೀಪರ್ನಿಂದ ಏಷ್ಯಾದಿಂದ ಹೊರಗೆ ಬಂದ ಮೊದಲ ಶತಕ ಇದಾಗಿದೆ. 21 ವರ್ಷಗಳ ಹಿಂದೆ ಇಂಗ್ಲೆಂಡ್ನಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಕರ್ನಾಟಕದ ರಾಹುಲ್ ದ್ರಾವಿಡ್ ಶ್ರೀಲಂಕಾ ವಿರುದ್ಧ 145 ರನ್ಗಳಿಸಿದ್ದರು. ಆ ಪಂದ್ಯದಲ್ಲಿ ಗಂಗೂಲಿ 183 ರನ್ಗಳಿಸಿದ್ದರು. ರಾಹುಲ್-ದ್ರಾವಿಡ್ 2 ವಿಕೆಟ್ಗೆ ಬರೋಬ್ಬರಿ 318 ರನ್ಗಳ ವಿಶ್ವದಾಖಲೆಯ ಜೊತೆಯಾಟ ನೀಡಿದ್ದರು.
ಭಾರತ ತಂಡ ಕೆ.ಎಲ್ ರಾಹುಲ್ರ ಶತಕ(112) , ಶ್ರೇಯಸ್ ಅಯ್ಯರ್ರ(62) ಅರ್ಧಶತಕ, ಮನೀಷ್ ಪಾಂಡೆ 42 ಹಾಗೂ ಪೃಥ್ವಿ ಶಾ 40 ರನ್ಗಳ ಸಹಾಯದಿಂದ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 296 ರನ್ಗಳಿಸಿದೆ.