ನವದೆಹಲಿ: ಪಸ್ತುತ ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಮೆಂಟ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ ಎಂದು ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಕೆ.ಎಲ್. ರಾಹುಲ್ 2020ರ ಐಪಿಎಲ್ನಲ್ಲಿ ತಂಡವನ್ನು ಮುನ್ನಡೆಸುವುದರ ಜೊತೆಗೆ, ತಾವೇ ಮುಂದಾಳಾಗಿ ನಿಂತು ಬ್ಯಾಟಿಂಗ್ನಲ್ಲೂ ಅದ್ಭುತ ಪ್ರದರ್ಶನ ತೋರಿದ್ದು, 11 ಪಂದ್ಯಗಳಿಂದ 5 ಅರ್ಧಶತಕ ಹಾಗೂ 1 ಶತಕದ ನೆರವಿನಿಂದ 567 ರನ್ಗಳಿಸಿ ಆರೆಂಜ್ ಕ್ಯಾಪ್ ಆರಂಭದಿಂದಲೂ ತಮ್ಮಲ್ಲೇ ಇಟ್ಟುಕೊಂಡಿದ್ದಾರೆ.
" ರಾಹುಲ್ ಪಂಜಾಬ್ ತಂಡವನ್ನು ಚಾಣಾಕ್ಷತೆಯಿಂದ ಮುನ್ನಡೆಸುತ್ತಿದ್ದಾರೆ. ರಾಹುಲ್ ನಾಯಕತ್ವದ ಜವಾಬ್ದಾರಿಯಲ್ಲಿ ಪಳಗುತ್ತಿದ್ದಾರೆ. ಜೊತೆಗೆ ಅವರು ಈ ಹಿಂದೆ ಆಟಗಾರನಾಗಿ ಗಳಿಸಿದ್ದಕ್ಕಿಂತ ಹೆಚ್ಚಿನ ರನ್ಗಳನ್ನು ನಾಯಕನಾಗಿ ಗಳಿಸಿಕೊಂಡಿದ್ದಾರೆ. ಅವರ ಫೀಲ್ಡ್ ಸೆಟ್ಟಿಂಗ್, ಬೌಲಿಂಗ್ ಬದಲಾವಣೆ, ಅದರಲ್ಲೂ ಕ್ರಿಸ್ ಜೋರ್ಡನ್ರಿಗೆ 19ನೇ ಓವರ್ ಬೌಲಿಂಗ್ ಕೊಡುವುದು ಹಾಗೂ ಯುವ ಬೌಲರ್ ಅರ್ಶ್ದೀಪ್ ಸಿಂಗ್ ಮೇಲೆ ನಂಬಿಕೆಯಿಟ್ಟು ಕೊನೆಯ ಓವರ್ನಲ್ಲಿ 14 ರನ್ಗಳನ್ನು ಡಿಫೆಂಡ್ ಮಾಡಿಕೊಳ್ಳಲು ಚೆಂಡನ್ನು ನೀಡಿದ್ದು ಮಾತ್ರ ಅವರ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ" ಎಂದು ಗವಾಸ್ಕರ್ ಕನ್ನಡಿಗನ ನಾಯಕತ್ವ ಕೊಂಡಾಡಿದ್ದಾರೆ.