ಶಾರ್ಜಾ: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಎಬಿ ಡಿ ವಿಲಿಯರ್ಸ್ ಆರ್ಸಿಬಿ ಜಯ ಸಾಧಿಸಲು ನೆರವಾಗಿದ್ದರು. ಈ ಬಗ್ಗೆ ಮಾತನಾಡಿರುವ ಕೋಲ್ಕತ್ತಾ ತಂಡದ ನಾಯಕ ದಿನೇಶ್ ಕಾರ್ತಿಕ್, ಎರಡು ತಂಡಗಳ ಬ್ಯಾಟ್ಸ್ಮನ್ಗಳಿಗಿಂತ ಎಬಿಡಿ ಆಟ ವಿಭಿನ್ನವಾಗಿತ್ತು. ಅವರ ಆಟದಿಂದಲೇ ಆರ್ಸಿಬಿಗೆ ಗೆಲುವು ದೊರೆಯಿತೆಂದು ಅಭಿಪ್ರಾಯಪಟ್ಟಿದ್ದಾರೆ.
ವಿಲಿಯರ್ಸ್ ಸೋಮವಾರ ನಡೆದ ಪಂದ್ಯದಲ್ಲಿ 33 ಎಸೆತಗಳಲ್ಲಿ 6 ಸಿಕ್ಸರ್, 5 ಬೌಂಡರಿ ಸಹಿತ 73 ರನ್ ಗಳಿಸಿದ್ದರು. ಅವರ ಬ್ಯಾಟಿಂಗ್ ಅಬ್ಬರ ಆರ್ಸಿಬಿ 82 ರನ್ಗಳ ಬೃಹತ್ ಅಂತರದ ಜಯ ಸಾಧಿಸಲು ನೆರವಾಗಿತ್ತು.
ಅವರು(ಎಬಿಡಿ) ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಮತ್ತು ಸಿಡಿದು ನಿಂತರೆ ಅವರನ್ನು ನಿಲ್ಲಿಸುವುದು ಕಷ್ಟ. ನಿನ್ನೆಯ ಪಂದ್ಯ ಅದಕ್ಕೆ ಸಾಕ್ಷಿ. ನಿನ್ನೆಯ ಪಂದ್ಯದಲ್ಲಿ ಅವರ ಇನ್ನಿಂಗ್ಸ್ ಎರಡು ತಂಡಗಳು ಬ್ಯಾಟ್ಸ್ಮನ್ಗಳಿಗಿಂತ ಬಹಳ ವಿಭಿನ್ನವಾಗಿತ್ತು ಎಂದು ಕಾರ್ತಿಕ್ ಪಂದ್ಯದ ನಂತರ ನಡೆದ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.