ಹೈದರಬಾದ್: ಐಪಿಎಲ್ ಇತಿಹಾಸದಲ್ಲಿ ಬ್ಯಾಟ್ಸ್ಮನ್ಗಳು ಬೌಂಡರಿ, ಸಿಕ್ಸರ್ಗಳ ಸುರಿಮಳೆ ಸುರಿಸುವುದು ಸಾಮಾನ್ಯ ಸಂಗತಿ. ಆದರೆ ಹಿಟ್ ವಿಕೆಟ್ ಮೂಲಕ ಬ್ಯಾಟ್ಸ್ಮನ್ ಔಟಾಗುವುದು ತುಂಬಾ ವಿರಳ. ಬುಧವಾರ ಕೆಕೆಆರ್ ವಿರುದ್ಧ ಮುಂಬೈ ಆಲ್ರೌಂಡರ್ ಪಾಂಡ್ಯ ಹಿಟ್ ವಿಕೆಟ್ ಆಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ರೀತಿ ವಿಕೆಟ್ ಒಪ್ಪಿಸಿದ 11ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಪಂದ್ಯದಲ್ಲಿ ಬರೋಡಾ ಆಟಗಾರ ಹಿಟ್ ವಿಕೆಟ್ ಆಗಿ ವಿಕೆಟ್ ಒಪ್ಪಿಸಿದ್ದರ ಪ್ರಾಯಶ್ಚಿತ್ತವಾಗಿ, ಅದ್ಭುತ ಕ್ಷೇತ್ರರಕ್ಷಣೆ ನಡೆಸಿ ಮೂರು ಕ್ಯಾಚ್ ತೆಗೆದುಕೊಳ್ಳುವ ಮೂಲಕ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಹಿಟ್ ವಿಕೆಟ್ ಆದ ಬ್ಯಾಟ್ಸ್ಮನ್ಗಳು ತಂಡದ ಮೊತ್ತ 147ಕ್ಕೆ 3 ಇದ್ದಾಗ ಬ್ಯಾಟಿಂಗ್ಗೆ ಇಳಿದಿದ್ದ ಹಾರ್ದಿಕ್ 13 ಎಸೆತಗಳಲ್ಲಿ 18 ರನ್ಗಳಿಸಿದ್ದರು. ಅವರು ರಸೆಲ್ ಬೌಲಿಂಗ್ನಲ್ಲಿ ಕ್ರೀಸ್ನಿಂದ ತುಂಬಾ ಹಿಂದೆ ಬಂದು ಹೊಡೆಯಲು ಯತ್ನಿಸಿದಾಗ ಅವರ ಬ್ಯಾಟ್ ಸ್ಟಂಪ್ಗೆ ತಾಗಿದ್ದರಿಂದ, ಹಿಟ್ ವಿಕೆಟ್ ಆದರು.
ಇನ್ನು ಐಪಿಎಲ್ ಇತಿಹಾಸದಲ್ಲಿ ಈ ರೀತಿ ವಿಚಿತ್ರವಾಗಿ ವಿಕೆಟ್ ಒಪ್ಪಿಸಿದ್ದು, ಇದೇ ಮೊದಲೇನಲ್ಲ. 2008ರಲ್ಲಿ ಮುಸವೀರ್ ಖೋಟೆ ಹಾಗೂ ಮಿಸ್ಬಾ ಉಲ್ ಹಕ್, 2009ರಲ್ಲಿ ಸ್ವಪ್ನಿಲ್ ಆಸ್ನೋಡಕರ್, 2012ರಲ್ಲಿ ರವೀಂದ್ರ ಜಡೇಜಾ, 2012ರಲ್ಲಿ ಸೌರಭ್ ತಿವಾರಿ, 2016ರಲ್ಲಿ ಡೇವಿಡ್ ವಾರ್ನರ್, ದೀಪಕ್ ಹೂಡಾ ಹಾಗೂ ಯುವರಾಜ್ ಸಿಂಗ್, 2017ರಲ್ಲಿ ಜಾಕ್ಸನ್ , 2019ರಲ್ಲಿ ರಿಯಾನ್ ಪರಾಗ್ ಹಿಟ್ ವಿಕೆಟ್ ಮೂಲಕ ಔಟಾಗಿದ್ದರು.