ಕರ್ನಾಟಕ

karnataka

ETV Bharat / sports

ಬಹುಕಾಲದ ಗೆಳತಿಯೊಂದಿಗೆ ದಾಂಪತ್ಯ ಆರಂಭಿಸಿದ ಕ್ರಿಕೆಟಿಗ ವರುಣ್ ಚಕ್ರವರ್ತಿ - ಸ್ಪಿನ್ನರ್ ವರುಣ್ ಚಕ್ರವರ್ತಿ ಮದುವೆ

ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದ ಕೆಕೆಆರ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

Varun Chakaravarthy ties the knot with girlfriend
ವರುಣ್ ಚಕ್ರವರ್ತಿ ವಿವಾಹ

By

Published : Dec 13, 2020, 8:42 PM IST

ಚೆನ್ನೈ: 2020ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಉತ್ತಮವಾಗಿ ಸ್ಪೆಲ್​ ಮಾಡಿ ಗಮನ ಸೆಳೆದಿದ್ದ ತಮಿಳುನಾಡು ಮೂಲದ ಸ್ಪಿನ್ನರ್ ವರುಣ್ ಚಕ್ರವರ್ತಿ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ.

ತಮ್ಮ ಬಹುಕಾಲದ ಗೆಳತಿ ನೇಹಾ ಖೇಡೇಕರ್ ಜೊತೆ ವರುಣ್ ವಿವಾಹವಾಗಿದ್ದು, ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಚೆನ್ನೈನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.

ಆರತಕ್ಷತೆಯಲ್ಲಿ ವರುಣ್ ಚಕ್ರವರ್ತಿ ತನ್ನ ಮಡದಿಗೆ ಬೌಲಿಂಗ್ ಮಾಡುವ ಮೂಲಕ ವಿಶೇಷವಾಗಿ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಕೆಕೆಆರ್​ ತಂಡ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದೆ.

ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್​ ಪರ ಕಣಕ್ಕಿಳಿದಿದ್ದ ವರುಣ್ ಚಕ್ರವರ್ತಿ 13 ಪಂದ್ಯಗಳಿಂದ 17 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಡೆಲ್ಲಿ ವಿರುದ್ಧ ಪಂದ್ಯದಲ್ಲಿ 20 ರನ್ ಬಿಟ್ಟುಕೊಟ್ಟು 5 ವಿಕೆಟ್​ ಪಡೆದು ಮಿಂಚಿದ್ದರು. ಐಪಿಎಲ್​ನಲ್ಲಿ ತೋರಿದ ಉತ್ತಮ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೂ ಆಯ್ಕೆಯಾಗಿದ್ದರು. ದುರಾದೃಷ್ಟವಶಾತ್ ಗಾಯದ ಕಾರಣದಿಂದಾಗಿ ತಂಡದಿಂದ ಕೈ ಬಿಡಲಾಯ್ತು.

ABOUT THE AUTHOR

...view details