ಕೋಲ್ಕತ್ತಾ:ಐಪಿಎಲ್‌ನ 2020ರ ಆವೃತ್ತಿಯ ಹರಾಜಿಗೂ ಮುನ್ನ, ಕೆಕೆಆರ್ ತಂಡದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಕ್ರಿಸ್ಲಿನ್ರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ತಂಡದ ಸಿಇಒ ಟ್ವೀಟ್ ಮಾಡಿ ಯುವರಾಜ್ ಸಿಂಗ್ ಕಾಲೆಳೆದಿದ್ದಾರೆ.
ಅಬುದಾಬಿ ಟಿ20 ಲೀಗ್ನಲ್ಲಿ ಕ್ರಿಸ್ಲಿನ್ ಜೊತೆಯಾಗಿ ಆಡುತ್ತಿರುವ ಯುವರಾಜ್ ಸಿಂಗ್ "ಕೆಕೆಆರ್, ಲಿನ್ರನ್ನು ತಂಡದಿಂದ ರಿಲೀಸ್ ಮಾಡಿದ್ದು ತಪ್ಪು ನಿರ್ಧಾರ" ಎಂದು ಟೀಕಿಸಿದ್ದರು. ಏಕೆಂದರೆ ಕ್ರಿಸ್ಲಿನ್ ಕೆಕೆಆರ್ ತಂಡದಿಂದ ಹೊರಬಿದ್ದ ದಿನವೇ ಟಿ20 ಲೀಗ್ನಲ್ಲಿ ಕೇವಲ 30 ಎಸೆತಗಳಲ್ಲಿ 91 ರನ್ ಗಳಿಸಿದ್ದರು. ಈ ಮೂಲಕ ಟಿ20 ಇತಿಹಾಸದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದ್ದರು.