ವೆಲ್ಲಿಂಗ್ಟನ್: ಜಗತ್ತಿನಾದ್ಯಂತ ಮಹಾಮಾರಿ ಕೊರೊನಾ ವೈರಸ್‍ನಿಂದ ಜನರು ಭಯ ಭೀತರಾಗಿದ್ದಾರೆ. ಒಬ್ಬರನ್ನೊಬ್ಬರು ಮಾತನಾಡಿಸಲು ಸಹ ಭಯಪಡುವ ಪರಿಸ್ಥಿತಿ ಉಂಟಾಗಿದೆ. ಈ ಎಲ್ಲ ಬೆಳವಣಿಗೆಯಿಂದ ಜಗತ್ತಿನಾದ್ಯಂತ ನಡೆಯಬೇಕಿದ್ದ ಎಲ್ಲಾ ಕ್ರೀಡಾಕೂಟಗಳನ್ನು ರದ್ದು ಮಾಡಲಾಗಿದೆ. ಇದರಿಂದ ಕ್ರೀಡಾಪಟುಗಳ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದು, ಜನರಿಗೆ ಕೊರೊನಾ ವೈರಸ್ ಬಗ್ಗೆ ತಮ್ಮದೆ ರೀತಿಯಲ್ಲಿ ಸಲಹೆ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ನಿಮ್ಮ ಮನೆ ‘ಕಾಂಡೋಮ್’ ಇದ್ದಂತೆ... ಮನೆಯಲ್ಲಿಯೇ ಆರೋಗ್ಯ ಕಾಪಾಡಿಕೊಳ್ಳಿ - ಕಿವೀಸ್ ಕ್ರಿಕೆಟರ್ ಸಲಹೆ - ಮಿಚೆಲ್ ಮೆಕ್‍ಕ್ಲೆನಾಘನ್
ವಿಶ್ವಾದ್ಯಂತ ಹರಡಿರುವ ಕೊರೊನಾಗೆ ಭಯಪಡದೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಕ್ರೀಡಾಪಟುಗಳು ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ನಿಮ್ಮ ಮನೆ ‘ಕಾಂಡೋಮ್’ ಇದ್ದಂತೆ
ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ನ್ಯೂಜಿಲ್ಯಾಂಡ್ ಕ್ರಿಕೆಟರ್ ಮಿಚೆಲ್ ಮೆಕ್‍ಕ್ಲೆನಾಘನ್ ಕೂಡಾ ಮಾಡಿದ್ದಾರೆ. ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಮಿಚೆಲ್ ಮೆಕ್‍ಕ್ಲೆನಾಘನ್, ‘ನಿಮ್ಮ ಮನೆಯನ್ನು ಕಾಂಡೋಮ್ ಎಂದು ಭಾವಿಸಿ. ಜೊತೆಗೆ ಕೋವಿಡ್ 19 ಅನ್ನು ಗುಣಪಡಿಸಲಾಗದ ಮಾರಕ ರೋಗ ಎಸ್‍ಟಿಡಿ (ಲೈಂಗಿಕವಾಗಿ ಹರಡುವ ರೋಗ- sexually transmitted disease) ಎಂದು ತಿಳಿಯಿರಿ. ಮನೆಯಲ್ಲಿಯೇ ಇರುವ ಮೂಲಕ ಕೊರೊನಾ ವೈರಸ್‍ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್ಗೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
Last Updated : Mar 20, 2020, 7:21 PM IST