ಕರ್ನಾಟಕ

karnataka

ETV Bharat / sports

ಕೆರಿಬಿಯನ್​​​​ ಪ್ರೀಮಿಯರ್​ ಲೀಗ್​ನ ಸೇಂಟ್​ ಲೂಸಿಯಾ ತಂಡವನ್ನು ಖರೀದಿಸಿದ ಐಪಿಎಲ್​​​​ ಫ್ರಾಂಚೈಸಿ! - Kings XI Punjab own Caribbean Premier League Team

ಕೆರಿಬಿಯನ್ ಲೀಗ್​ನ ಅತ್ಯಂತ ಯಶಸ್ವಿ ತಂಡವಾದ ಟ್ರಿಂಬ್ಯಾಂಗೋ ನೈಟ್ ರೈಡರ್ಸ್​ ಫ್ರಾಂಚೈಸಿಯನ್ನು​ ಕೋಲ್ಕತ್ತಾ ನೈಟ್ ರೈಡರ್ಸ್​ನ ಮಾಲೀಕ ಶಾರುಖ್​ ಖಾನ್​ 2015ರಲ್ಲಿ ಖರೀದಿಸಿದ್ದರು. ಇದೀಗ ನೆಸ್​ ವಾಡಿಯಾ ಕೂಡ ಮತ್ತೊಂದು ತಂಡವನ್ನು ಖರೀಸುವ ಮೂಲಕ ಸಿಪಿಎಲ್​ನಲ್ಲೂ ತಮ್ಮ ಖದರ್​ ತೋರಿಸಲು ಹೊರಟಿದ್ದಾರೆ.

Kings XI Punjab
ಕಿಂಗ್ಸ್​ ಇಲೆವೆನ್​ ಪಂಜಾಬ್​

By

Published : Feb 18, 2020, 6:40 PM IST

ನವದೆಹಲಿ: ಐಪಿಎಲ್ ​ನಂತರ ಕ್ರಿಕೆಟ್​ ಅಭಿಮಾನಿಗಳ ಕಿಚ್ಚೆಬ್ಬಿಸುವ ಟಿ-20 ಲೀಗ್​ಗಳಲ್ಲಿ ಒಂದಾದ ಕೆರಿಬಿಯನ್​ ಲೀಗ್​ ಸೇಂಟ್​ ಲೂಸಿಯಾ ತಂಡವನ್ನು ಕಿಂಗ್ಸ್​ ಇಲೆವೆನ್​ ಪಂಜಾಬ್ ತಂಡದ ಮಾಲೀಕ ನೆಸ್​ ವಾಡಿಯಾ ಖರೀದಿಸಿದ್ದಾರೆ.

ಈಗಾಗಲೇ ಕೆರಿಬಿಯನ್ ಲೀಗ್​ನ ಅತ್ಯಂತ ಯಶಸ್ವಿ ತಂಡವಾದ ಟ್ರಿಂಬ್ಯಾಂಗೋ ನೈಟ್ ರೈಡರ್ಸ್​ ಫ್ರಾಂಚೈಸಿಯನ್ನು​ ಕೋಲ್ಕತ್ತಾ ನೈಟ್ ರೈಡರ್ಸ್​ನ ಮಾಲೀಕ ಶಾರುಖ್​ ಖಾನ್​ 2015ರಲ್ಲಿ ಖರೀದಿಸಿದ್ದರು. ಇದೀಗ ನೆಸ್​ ವಾಡಿಯಾ ಕೂಡ ಮತ್ತೊಂದು ತಂಡವನ್ನು ಖರೀಸುವ ಮೂಲಕ ಸಿಪಿಎಲ್​ನಲ್ಲೂ ತಮ್ಮ ಖದರ್​ ತೋರಿಸಲು ಹೊರಟಿದ್ದಾರೆ.

ಕಿಂಗ್ಸ್​ ಇಲೆವೆನ್​ ಪಂಜಾಬ್​

"ನಾವು ಸಿಪಿಎಲ್​ನ ಸೇಂಟ್​ ಲೂಸಿಯಾ ಫ್ರಾಂಚೈಸಿಯನ್ನು ಖರೀದಿಸಿದ್ದೇವೆ. ಬಿಸಿಸಿಐ ಅನುಮತಿ ನೀಡಿದ ನಂತರ ಕಂಪನಿಯ ಹೆಸರು ಹಾಗೂ ತಂಡದ ರಚನೆಯ ಬಗ್ಗೆ ತಿಳಿಸುತ್ತೇವೆ ಎಂದು ಕಿಂಗ್ಸ್​ ಇಲೆವೆನ್​ ಪಂಜಾಬ್​ನ ಸಹ ಮಾಲೀಕ ನೆಸ್ ​ವಾಡಿಯಾ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಕೆರಿಬಿಯನ್​ನ ಮೋಹಿತ್​ ಬರ್ಮನ್​( ಸಹ ಮಾಲೀಕ) ಸದ್ಯ ತಂಡದ ಮಾಲೀಕತ್ವದ ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ. ಫ್ರಾಂಚೈಸಿಯನ್ನು ಖರೀದೀಸಲು ನೆರವು ನೀಡಿದ ಸೇಂಟ್​ ಲೂಸಿಯಾದ ಪ್ರಧಾನಿ ಅಲನ್​ ಚಾಸ್ಟನೆಟ್​ ಅವರಿಗೆ ಮೊದಲು ಧನ್ಯವಾದ ಕೋರಲು ಬಯಸುತ್ತೇನೆ. ನಾವು ಈ ಪ್ರಕ್ರಿಯೆಗಾಗಿ ಹೆಚ್ಚು ಕಡಿಮೆ 9 ತಿಂಗಳು ತೆಗೆದುಕೊಂಡಿದ್ದೆವು ಎಂದು ಅವರು ತಿಳಿಸಿದ್ದಾರೆ.

ಸೇಂಟ್​ ಲೂಸಿಯಾ ತಂಡವನ್ನು ಕಳೆದ ಆರು ಆವೃತ್ತಿಗಳಲ್ಲೂ ವೆಸ್ಟ್​ ಇಂಡೀಸ್​ ಮಾಜಿ ನಾಯಕ ಡೆರಾನ್​ ಸಾಮಿ ಮುನ್ನಡೆಸಿದ್ದಾರೆ. ಶಾರುಖ್​ ಖಾನ್​ ಮಾಲಿಕತ್ವದ ಟಿಕೆಆರ್​ 3 ಬಾರಿ ಟೈಟಲ್​ ಗೆದ್ದು ಸಿಪಿಎಲ್​ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ.

ABOUT THE AUTHOR

...view details