ಅಬುಧಾಬಿ: ಆಫ್ಘಾನಿಸ್ತಾನದ ವಿರುದ್ಧ ಟಿ20 ಸರಣಿಯಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಪೋಲಾರ್ಡ್ ಅಬುಧಾಬಿ ಟಿ20 ಲೀಗ್ಗೆ ಕಾಲಿಟ್ಟ ಮೊದಲ ಪಂದ್ಯದಲ್ಲಿಯೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.
ನಿನ್ನೆ ಲಖನೌದಲ್ಲಿ ಟಿ20 ಸರಣಿ ಮುಗಿಸಿ ಅಬುಧಾಬಿಗೆ ಆಗಮಿಸಿರುವ ವಿಂಡೀಸ್ ಆಟಗಾರರು ಇಂದು ಟಿ10 ಲೀಗ್ನಲ್ಲಿ ಆಡಿದ್ದಾರೆ. ಅದರಲ್ಲೂ ವಿಂಡೀಸ್ ನಾಯಕ ಪೋಲಾರ್ಡ್ ಡೆಕ್ಕನ್ ಗ್ಲಾಡಿಯೇಟರ್ ಪರ ಬ್ಯಾಟಿಂಗ್‌ಗಿಳಿದು ಕೇವಲ 22 ಎಸೆತಗಳಲ್ಲಿ 45 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿಕೊಟ್ಟರು.
ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿರುವ ನೇಪಾಳ ಯುವ ಸ್ಪಿನ್ ಬೌಲರ್ ಸಂದೀಪ್ ಲೆಮಿಚ್ಚಾನೆ ಎಸೆದ 7ನೇ ಓವರ್ನಲ್ಲಿ ಪೋಲಾರ್ಡ್ 30 ರನ್ ದೋಚುವ ಮೂಲಕ ಸೋಲಿನತ್ತ ಮುಖಮಾಡಿದ್ದ ಪಂದ್ಯವನ್ನು ಗೆಲುವಿನ ಸನಿಹ ತಂದರು. ಪೋಲಾರ್ಡ್ ಒಂದೇ ಓವರ್ನಲ್ಲಿ ಸತತ 6,6,6,6,4,2 ರನ್ ಸಿಡಿಸಿ ಯುವ ಸ್ಪಿನ್ನರ್ ಮುಖದಲ್ಲಿ ಬೆವರಿಳಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ಟಸ್ಕರ್ಸ್ ತಂಡ 10 ಓವರ್ಗಳಲ್ಲಿ 110 ರನ್ಗಳಿಸಿತ್ತು. ಈ ಮೊತ್ತವನ್ನು ಗ್ಲಾಡಿಯೇಟರ್ ಪೋಲಾರ್ಡ್ ಅಬ್ಬರದಿಂದ ಕೇವಲ 8.3 ಓವರ್ಗಳಲ್ಲಿ ಗೆಲುವು ಸಾಧಿಸಿತು.