ಕರ್ನಾಟಕ

karnataka

ETV Bharat / sports

ಒಂದೇ ಪಂದ್ಯದಲ್ಲಿ ಎರಡು ವಿಶ್ವದಾಖಲೆ ಬರೆದ ಕೀರನ್​ ಪೊಲಾರ್ಡ್​ - ಕ್ರಿಸ್​ ಗೇಲ್​

ಪೊಲಾರ್ಡ್​ ಶ್ರೀಲಂಕಾ ವಿರುದ್ಧ ತಮ್ಮ ವೃತ್ತಿ ಜೀವನದ 500ನೇ ಟಿ-20 ಪಂದ್ಯ ಹಾಗೂ 10,000 ರನ್​ ಗಳಿಸಿದ ವಿಶ್ವದ ಏಕೈಕ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.

Kieron Pollard 500 T20
ಕೀರನ್​ ಪೊಲಾರ್ಡ್​ 500 ಟಿ20

By

Published : Mar 4, 2020, 11:03 PM IST

ಪಲ್ಲೆಕೆಲೆ(ಶ್ರೀಲಂಕಾ):ವೆಸ್ಟ್ ಇಂಡೀಸ್​​ ತಂಡದ ನಾಯಕ ಕೀರನ್​ ಪೊಲಾರ್ಡ್​ ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಎರಡು ವಿಶ್ವದಾಖಲೆಗಳಿಗೆ ಪಾತ್ರರಾಗಿದ್ದಾರೆ.

ಪೊಲಾರ್ಡ್​ ಬುಧವಾರ ಶ್ರೀಲಂಕಾ ವಿರುದ್ಧ ತಮ್ಮ ವೃತ್ತಿ ಜೀವನದ 500ನೇ ಟಿ-20 ಪಂದ್ಯ ಆಡಿದರು. ಈ ಮೂಲಕ ಟಿ-20 ಕ್ರಿಕೆಟ್​ ಇತಿಹಾಸದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟರ್​ ಎನಿಸಿಕೊಂಡರು. ಇವರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿರುವ ಗೇಲ್​ 404 ಪಂದ್ಯಗಳನ್ನಾಡಿದ್ದಾರೆ.

ಇನ್ನು 4ನೇ ಕ್ರಮಾಂದಲ್ಲಿ ಬ್ಯಾಟಿಂಗ್​ ಮಾಡಿ ಕೇವಲ 15 ಎಸೆತಗಳಲ್ಲಿ 34 ರನ್ ​ಗಳಿಸಿದ ಅವರು ಟಿ-20 ಕ್ರಿಕೆಟ್​ನಲ್ಲಿ 10,000 ರನ್​ ಪೂರೈಸಿದರು. ಈ ಮೂಲಕ ವೆಸ್ಟ್​ ಇಂಡೀಸ್​​​ನವರೇ ಆದ ಕ್ರಿಸ್​ ಗೇಲ್​ ನಂತರ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ದಾಖಲೆಗೆ ಪೊಲಾರ್ಡ್​ ಪಾತ್ರರಾದರು.

ಕ್ರಿಸ್​ ಗೇಲ್​ 404 ಟಿ-20 ಪಂದ್ಯಗಳಿಂದ 13,296 ರನ್ ​ಗಳಿಸಿದ್ದಾರೆ. ಪೊಲಾರ್ಡ್​ 500 ಪಂದ್ಯಗಳಿಂದ 10,000 ರನ್ ​ಗಳಿಸಿದ್ದರೆ, ಕಿವೀಸ್​ನ ಬ್ರೆಂಡನ್​ ಮೆಕಲಮ್​ 9,922 ರನ್ ​ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆದ 3 ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ 25 ರನ್​ಗಳ ಜಯ ಸಾಧಿಸಿತು.

ABOUT THE AUTHOR

...view details