ಕರ್ನಾಟಕ

karnataka

ETV Bharat / sports

‘ಒತ್ತಡದಲ್ಲಿದ್ದ ನನಗೆ ರೋಹಿತ್ ನೀಡಿದ​ ಬೆಂಬಲ ಆತ್ಮವಿಶ್ವಾಸ ಹೆಚ್ಚಿಸಿತು’

ಮೊದಲ ಟಿ -20 ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿ ತುಂಬಾ ಒತ್ತಡಕ್ಕೊಳಗಾಗಿದ್ದ ಖಲೀಲ್ ಅಹಮ್ಮದ್​​ ಎರಡನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

mumbai

By

Published : Feb 14, 2019, 3:12 PM IST

ಮುಂಬೈ: ಮೊದಲ ಟಿ -20 ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿ ತುಂಬಾ ಒತ್ತಡಕ್ಕೊಳಗಾಗಿದ್ದ ಖಲೀಲ್ ಅಹಮ್ಮದ್​​ ಎರಡನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಖಲೀಲರ ಆ​ ಪ್ರದರ್ಶನದ ಹಿಂದೆ ನಾಯಕ ರೋಹಿತ್​ ಶರ್ಮಾ ಇದ್ದರು ಎಂಬುದನ್ನು ಸ್ವತಃ ಖಲೀಲ್​ ಬಹಿರಂಗ ಪಡಿಸಿದ್ದಾರೆ.

ಮೊದಲ ಟಿ-20 ಪಂದ್ಯದಲ್ಲಿ 48 ರನ್​ ನೀಡಿದ್ದ ಖಲೀಲ್​ ತುಂಬಾ ಒತ್ತಡಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ನಾಯಕ ರೋಹಿತ್​ 21 ವರ್ಷದ ಯುವಕನ ಬೆನ್ನಿಗೆ ನಿಂತು, ಆತ್ಮಸ್ಥೈರ್ಯ ತುಂಬುವ ಮೂಲಕ ಖಲೀಲ್​ಅವರಿಗಿದ್ದ ಒತ್ತಡವನ್ನು ನಿವಾರಿಸಿದ್ದರು.

"ರೋಹಿತ್​ ನನಗೆ ಧೈರ್ಯ ಹೇಳಿದ್ದಲ್ಲದೆ, ನಿನಗೆ ಹೇಗೆ ಬೇಕೋ ಹಾಗೆ ಬಿಂದಾಸ್​ ಆಗಿ ಬೌಲಿಂಗ್​ ಮಾಡು ಎಂದು ಆತ್ಮವಿಶ್ವಾಸ ತುಂಬಿದರು. ಇದು ನನಗೆ ಎರಡನೇ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್​ ಮಾಡಲು ನೆರವಾಯಿತು" ಎಂದು ಖಾಸಗಿ ಮಾದ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಖಲೀಲ್​ ತಮ್ಮ ಅನಿಸಿಕೆಯನ್ನ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಖಲೀಲ್​ 27 ರನ್​ ನೀಡಿ 2 ವಿಕೆಟ್​ ಪಡೆದಿದ್ದರು.

ಖಲೀಲ್​ಗೆ ಈಗ ಕೇವಲ 21 ವರ್ಷದ ಹರೆಯ, ಈ ಹಿಂದೆ ಆಶಿಸ್​ ನೆಹ್ರಾ, ಜಹೀರ್​ ಖಾನ್​ ಮಾತ್ರ ಭಾರತ ಕ್ರಿಕೆಟ್​ನ ಯಶಸ್ವಿ ಎಡಗೈ ಬೌಲರ್​ ಆಗಿದ್ದರು. ಇವರಿಬ್ಬರ ನಂತರ ಬಂದ ಆರ್.​ಪಿ.ಸಿಂಗ್​ ಅಷ್ಟೊಂದು ಯಶಸ್ಸು ಸಿಗಲಿಲ್ಲ. ಇರ್ಫಾನ್​ ಪಠಾಣ್​ ಯಶಸ್ವಿಯಾದರೂ ಗಾಯದ ಸಮಸ್ಯೆ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಮಾಡಿತು. ನಂತರ ಬಂದ ಮತ್ತೊಬ್ಬ ಯುವ ಬೌಲರ್​ ಜಯದೇವ್​ ಉನಾದ್ಕಟ್​ ಕೂಡ ಪರಿಣಾಮಕಾರಿಯಾಗಲಿಲ್ಲ. ಇದೀಗ ಬಹಳ ವರ್ಷಗಳ ಕಾಲ ಎಡಗೈ ಬೌಲರ್​ ಒಬ್ಬ ತಂಡಕ್ಕೆ ಸೇರ್ಪಡೆಯಾಗಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಭವಿಷ್ಯದಲ್ಲಿ ಈತನ ಪ್ರದರ್ಶನ ಭಾರತ ತಂಡಕ್ಕೆ ಬಹಳ ಉಪಯುಕ್ತವಾಗಲಿದೆ ಎಂಬ ಮಾತು ಕ್ರಿಕೆಟ್​ ವಲಯದಲ್ಲಿ ಕೇಳಿಬರುತ್ತಿದೆ.

ABOUT THE AUTHOR

...view details