ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 317ರನ್ಗಳ ಬೃಹತ್ ಗೆಲುವು ದಾಖಲು ಮಾಡಿದ್ದು, ಕೊಹ್ಲಿ ಪಡೆಗೆ ಎಲ್ಲೆಡೆಯಿಂದ ಅಭಿನಂದನೆ ಜತೆಗೆ ಪ್ರಶಂಸೆಗಳ ಸುರಿಮಳೆ ಮಾಡಲಾಗುತ್ತಿದೆ. ಇದರ ಮಧ್ಯೆ ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಪಿಟರ್ಸನ್ ಟೀಂ ಇಂಡಿಯಾ ಕಾಲೆಳೆದಿದ್ದಾರೆ.
ಓದಿ: ಟೆಸ್ಟ್ ಗೆಲ್ಲುವುದಕ್ಕೆ ನಾವು ತೋರಿದ ಉತ್ಸಾಹ, ಪರಿಶ್ರಮ ಕಾರಣವೇ ಹೊರತು, ಟಾಸ್ ಅಲ್ಲ: ಕೊಹ್ಲಿ
ಇದೀಗ ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಕೆವಿನ್ ಪಿಟರ್ಸನ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಇಂಗ್ಲೆಂಡ್ ಬಿ ತಂಡ ಸೋಲಿಸಿದಕ್ಕಾಗಿ ಅಭಿನಂದನೆಗಳು ಎಂದು ಕೆವಿನ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.