ಮುಂಬೈ: ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ ಆದ ಐಪಿಎಲ್ 2020ರ ಆವೃತ್ತಿಗೆ ಡಿಸೆಂಬರ್ 20ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಈಗಲೇ ಕೆಲವು ಆಟಗಾರರ ಬಗ್ಗೆ ಚರ್ಚೆ ಆರಂಭವಾಗಿದೆ.
ಭಾರತದ ಮಾಜಿ ಕ್ರಿಕೆಟಿಗೆ ಹಾಗೂ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂಜಯ್ ಮಂಜ್ರೇಕರ್ ವಿಂಡೀಸ್ನ ಬೌಲರ್ ಕೆಸ್ರಿಕ್ ವಿಲಿಯಮ್ಸ್ ಐಪಿಎಲ್ಗೆ ಸರಿಯಾದ ಬೌಲರ್. ಇವರತ್ತ ಗಮನ ನೀಡಿದೆ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಪ್ರತಿಕ್ರಿಯಿಸಿದ್ದು, ನಿಮ್ಮ ಮಾತು ಸಂಪೂರ್ಣವಾಗಿ ಒಪ್ಪುವಂತದ್ದಲ್ಲ. ಅವರು ಸಾಕಷ್ಟು ಉತ್ತಮ ಬೌಲರ್ ಅಲ್ಲ! ಅವರಲ್ಲಿ ಸೆಲೆಬ್ರೇಷನ್ ಮಾಡುವುದನ್ನು ಬಿಟ್ಟರೆ ಬೇರೇನೂ ವಿಶೇಷತೆಯಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.