ಕರ್ನಾಟಕ

karnataka

ETV Bharat / sports

ನಿಷೇಧದ ನಂತರ ಕ್ರಿಕೆಟ್​ಗೆ ಮರಳಿದ ಪಂದ್ಯದಲ್ಲಿ ಮಿಂಚಿದ ಶ್ರೀಶಾಂತ್​... ಕೇರಳ ಶುಭಾರಂಭ

ಕೇರಳ ಮತ್ತು ಪುದುಚೇರಿ ವಿರುದ್ಧ ನಡೆದ ಪಂದ್ಯ ಶ್ರೀಶಾಂತ್ ಪುನರಾಗಮನಕ್ಕೆ ವೇದಿಕೆಯಾಯಿತು. ವಿಶೇಷವೆಂದರೆ ಈ ಪಂದ್ಯದಲ್ಲಿ ತಮ್ಮ ಎರಡನೇ ಓವರ್​ನಲ್ಲೇ ವಿಕೆಟ್​ ಪಡೆದು ಮಿಂಚಿದರು.

ಶ್ರೀಶಾಂತ್ ಕಮ್​ಬ್ಯಾಕ್​
ಶ್ರೀಶಾಂತ್ ಕಮ್​ಬ್ಯಾಕ್​

By

Published : Jan 11, 2021, 11:02 PM IST

ಮುಂಬೈ:ಐಪಿಎಲ್​ನಲ್ಲಿ ಮ್ಯಾಚ್​ ಫಿಕ್ಸಿಂಗ್ ಅಪವಾದ ಹೊತ್ತು, 7 ವರ್ಷ ನಿಷೇಧಕ್ಕೊಳಗಾಗಿದ್ದ ಭಾರತ ತಂಡದ ಮಾಜಿ ವೇಗಿ ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್​ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿದ್ದಾರೆ.

ಕೇರಳ ಮತ್ತು ಪುದುಚೇರಿ ವಿರುದ್ಧ ನಡೆದ ಪಂದ್ಯ ಶ್ರೀಶಾಂತ್ ಪುನರಾಗಮನಕ್ಕೆ ವೇದಿಕೆಯಾಯಿತು. ವಿಶೇಷವೆಂದರೆ ಈ ಪಂದ್ಯದಲ್ಲಿ ತಮ್ಮ ಎರಡನೇ ಓವರ್​ನಲ್ಲೇ ವಿಕೆಟ್​ ಪಡೆದು ಮಿಂಚಿದರು. ಪುದುಚೇರಿಯ ಆರಂಭಿಕ ಬ್ಯಾಟ್ಸ್​ಮನ್​ ಫಾಬಿದ್ ಅಹ್ಮದ್​ರನ್ನು ಬೌಲ್ಡ್ ಮೂಲಕ ಶ್ರೀಶಾಂತ್ ಕ್ರಿಕೆಟ್​ ಜೀವನ ಎರಡನೇ ಇನ್ನಿಂಗ್ಸ್ ‌ಅನ್ನು ಸ್ಮರಣೀಯವಾಗಿಸಿಕೊಂಡರು. ಈ ಪಂದ್ಯದಲ್ಲಿ ಶ್ರೀಶಾಂತ್​ 4 ಓವರ್​ ಎಸೆದು 29 ರನ್​ ನೀಡಿ ಒಂದು ವಿಕೆಟ್​ ಪಡೆದರು.

ಸಂಜು ಸಾಮ್ಸನ್​ ನೇತೃತ್ವದ ಕೇರಳ ತಂಡ ಪುದಚೇರಿಯನ್ನು 20 ಓವರ್​ಗಳಲ್ಲಿ 137ಕ್ಕೆ ನಿಯಂತ್ರಿಸಿತ್ತು. ಜಲಜ್ ಸಕ್ಸೇನಾ 3 ವಿಕೆಟ್​ ಪಡೆದರೆ,ಶ್ರೀಶಾಂತ್ ಮತ್ತು ಆಸಿಫ್​ ತಲಾ ಒಂದು ವಿಕೆಟ್ ಪಡೆದಿದ್ದರು.

ಇನ್ನು ಸಾಧಾರಣ ಗುರಿ ಬೆನ್ನತ್ತಿದ ಕೇರಳ ತಂಡ 18.2 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ತಲುಪಿ ಟೂರ್ನಿಯನ್ನ ಶುಭಾರಂಭ ಮಾಡಿತು.

ರಾಬಿನ್ ಉತ್ತಪ್ಪ 21, ಮೊಹಮ್ಮದ್ ಅಜರುದ್ದೀನ್​ 30, ಸಂಜು ಸಾಮ್ಸನ್​ 32, ಸಚಿನ್ ಬೇಬಿ 18, ವಿಷ್ಣ ವಿನೋದ್ ಅಜೇಯ 11, ಸಲ್ಮಾನ್​ ನಜೀರ್​ ಅಜೇಯ 20 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ABOUT THE AUTHOR

...view details