ಮ್ಯಾಂಚೆಸ್ಟರ್:ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರುತ್ತಿರುವ ವಿಂಡೀಸ್ ಬೌಲರ್ ಕೆಮರ್ ರೋಚ್ ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ ಸಾಧನೆ ಮಾಡಿದ್ದಾರೆ.
ಮೊದಲ ದಿನದಾಟದಲ್ಲಿ ಇಂಗ್ಲೆಂಡ್ 262ಕ್ಕೆ 4 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ 2 ವಿಕೆಟ್ ಪಡೆದಿದ್ದ ರೋಚ್ ಮೂರನೇ ದಿನ ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ವೋಕ್ಸ್ ಅವರ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ ಮೈಲಿಗಲ್ಲನ್ನು ದಾಟಿದರು. ಈ ಮೂಲಕ ಈ ಸಾಧನೆ ಮಾಡಿದ ವೆಸ್ಟ್ ಇಂಡೀಸ್ನ 9ನೇ ಬೌಲರ್ ಎನಿಸಿಕೊಂಡರು.
ಆಶ್ಚರ್ಯವೆಂದರೆ ರೋಚ್ ವಿಂಡೀಸ್ ಪರ 26 ವರ್ಷಗಳ ನಂತರ 200 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಇವರನ್ನು ಬಿಟ್ಟರೆ 1994ರಿಂದ ಕೆರಿಬಿಯನ್ ತಂಡದ ಯಾವೊಬ್ಬ ಬೌಲರ್ ಕೂಡ 200 ವಿಕೆಟ್ ಪಡೆದಿಲ್ಲ ಎನ್ನುವುದು ಆಶ್ಚರ್ಯವೇ ಸರಿ. 1994ರಲ್ಲಿ ಕರ್ಟ್ಲಿ ಆ್ಯಂಬ್ರೋಸ್ ಕೊನೆಯ ಬಾರಿ ವೆಸ್ಟ್ ಇಂಡೀಸ್ ಪರ 200 ವಿಕೆಟ್ ಸಾಧನೆ ಮಾಡಿದ್ದರು.
ಇದಲ್ಲದೆ ವಿಂಡೀಸ್ ಪರ ಗರಿಷ್ಠ ವಿಕೆಟ್ ಪಡೆದ 8ನೇ ಬೌಲರ್ ಎನಿಸಿಕೊಂಡರು. ವಿಂಡೀಸ್ ಪರ ಕರ್ಟ್ನಿ ವಾಲ್ಶ್(514) ಹಾಗೂ ಕರ್ಟ್ಲಿ ಆಂಬ್ರೋಸ್(405) ಗರಿಷ್ಠ ವಿಕೆಟ್ ಪಡೆದ ಬೌಲರ್ಗಳಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ.
ವೆಸ್ಟ್ ಇಂಡೀಸ್ ಪರ 200 ವಿಕೆಟ್ ಪಡೆದ ಬೌಲರ್ಗಳು
- ಮಾಲ್ಕಾಮ್ ಮಾರ್ಷಲ್(42 ಪಂದ್ಯ)
- ಜಾಯೆಲ್ ಗಾರ್ನರ್(44)
- ಕರ್ಟ್ಲಿ ಆ್ಯಂಬ್ರೋಸ್(45)
- ಲ್ಯಾನ್ಸ್ ಗಿಬ್ಸ್/ಆ್ಯಂಡಿ ರೋಬರ್ಸ್(46)
- ಮೈಕಲ್ ಹೋಲ್ಡಿಂಗ್(47)
- ಕರ್ಟ್ನಿ ವಾಲ್ಶ್ (58)
- ಕೆಮರ್ ರೋಚ್(59)
- ಗ್ಯಾರಿ ಸೋಬರ್ಸ್(80)