ಚೆನ್ನೈ:ಮುಂಬೈ ವಿರುದ್ಧ ಬುಧವಾರ ನಡೆದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಪಂದ್ಯದಲ್ಲಿ ಕೇವಲ 54 ಎಸೆತಗಳಲ್ಲಿ 137 ರನ್ಗಳಿಸಿದ ಮೊಹಮ್ಮದ್ ಅಜರುದ್ದೀನ್ ಅವರಿಗೆ ಕೇರಳ ಕ್ರಿಕೆಟ್ ಬೋರ್ಡ್ ಒಂದು ರನ್ಗೆ ಒಂದು ಸಾವಿರ ರೂನಂತೆ ಬಹುಮಾನ ಘೋಷಿಸಿದೆ.
ಬಲಿಷ್ಠ ಮುಂಬೈ ವಿರುದ್ಧದ ಪಂದ್ಯದಲ್ಲಿ 26 ವರ್ಷದ ಮೊಹಮ್ಮದ್ ಅಜರುದ್ದೀನ್ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಸಯ್ಯದ್ ಮುಷ್ತಾಕ್ ಅಲಿ ಇತಿಹಾಸದಲ್ಲಿ 2ನೇ ವೇಗದ ಶತಕವಾಗಿತ್ತು.
(ಪಂತ್ 32 ಎಸೆತಗಳಲ್ಲಿ ಶತಕ ಸಿಡಿಸಿದ ಈ ದಾಖಲೆ ಹೊಂದಿದ್ದಾರೆ). ಅಜರುದ್ದೀನ್ ಇನ್ನಿಂಗ್ಸ್ನಲ್ಲಿ 11 ಭರ್ಜರಿ ಸಿಕ್ಸರ್ ಮತ್ತು 9 ಬೌಂಡರಿ ಸೇರಿದ್ದವು. ಇವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇರಳ ತಂಡ ಮುಂಬೈ ನೀಡಿದ್ದ 197ರನ್ಗಳ ಗುರಿಯನ್ನು 15.5 ಓವರ್ಗಳಲ್ಲಿ ತಲುಪಿತ್ತು.