ಅಡಿಲೇಡ್ (ಆಸ್ಟ್ರೇಲಿಯಾ): ಶ್ರೀಲಂಕಾದ ವೇಗದ ಬೌಲರ್ ಕಸುನ್ ರಜಿತಾ ಆಸ್ಟ್ರೇಲಿಯಾ ವಿರುದ್ಧ 4 ಓವರ್ಗಳಲ್ಲಿ75 ರನ್ ಬಿಟ್ಟುಕೊಡುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಕಳಪೆ ದಾಖಲೆಗೆ ಪಾತ್ರರಾಗಿದ್ದಾರೆ.
ಅಡಿಲೇಡ್ನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ಅಬ್ಬರಕ್ಕೆ ಸಿಲುಕಿದ ಶ್ರೀಲಂಕಾ 20 ಓವರ್ಗಳಲ್ಲಿ 232 ರನ್ ಬಿಟ್ಟುಕೊಟ್ಟಿತು. ಆರಂಭಿಕರಾದ ವಾರ್ನರ್ 100 , ಫಿಂಚ್ 64 ಹಾಗೂ ಮ್ಯಾಕ್ಸ್ವೆಲ್ 62 ರನ್ಗಳಿಸಿ ಲಂಕಾ ಬೌಲಿಂಗ್ ಪುಡಿಗಟ್ಟಿದ್ದರು.