ಕರ್ನಾಟಕ

karnataka

ETV Bharat / sports

ಕಾಶ್ಮೀರ ನಮ್ದಾಗಿತ್ತು, ನಮ್ದಾಗಿದೆ, ನಮ್ದಾಗಿರುತ್ತೆ... ಅಫ್ರಿದಿಗೆ ಗಬ್ಬರ್​ ಸಿಂಗ್ ಖಡಕ್​​ ವಾರ್ನಿಂಗ್​​​​​ - ಯುವರಾಜ್​ ಸಿಂಗ್​

ಇಡೀ ಪ್ರಪಂಚ ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ, ನೀವು ಕಾಶ್ಮೀರದ ಬಗ್ಗೆ ಆಲೋಚಿಸುತ್ತಿದ್ದೀರಾ. ಕಾಶ್ಮೀರ ನಮ್ಮದಾಗಿತ್ತು, ನಮ್ಮದಾಗಿದೆ, ಯಾವಾಗಲೂ ನಮ್ದಾಗಿರುತ್ತದೆ. ನೀವು 22 ಕೋಟಿ(ಜನಸಂಖ್ಯೆ) ತೆಗೆದುಕೊಳ್ಳಿ. ಅದು ನಮ್ಮ ಒಂದು 15 ಲಕ್ಷ ಜನರಿಗೆ ಸಮ. ಉಳಿದಿದ್ದನ್ನು ನೀವೇ ಲೆಕ್ಕ ಮಾಡಿಕೊಳ್ಳಿ ಎಂದು ಟ್ವೀಟ್​ ಮಾಡಿ ಅಫ್ರಿದಿಗೆ ತಿರುಗೇಟು ನೀಡಿದ್ದಾರೆ.

ಶಿಖರ್​ ಧವನ್
ಶಿಖರ್​ ಧವನ್

By

Published : May 18, 2020, 10:29 AM IST

ನವದೆಹಲಿ:ಕಾಶ್ಮೀರ ವಿಚಾರವಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಅಫ್ರಿದಿಗೆ ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್​ ಧವನ್​ ಖಡಕ್ಕಾಗಿ ತಿರುಗೇಟು ನೀಡಿದ್ದಾರೆ.

ಇಡೀ ಪ್ರಪಂಚ ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ, ನೀವು ಕಾಶ್ಮೀರದ ಬಗ್ಗೆ ಆಲೋಚಿಸುತ್ತಿದ್ದೀರಾ. ಕಾಶ್ಮೀರ ನಮ್ಮದಾಗಿತ್ತು, ನಮ್ಮದಾಗಿದೆ, ಯಾವಾಗಲೂ ನಮ್ದಾಗಿರುತ್ತದೆ. ನೀವು 22 ಕೋಟಿ(ಜನಸಂಖ್ಯೆ) ತೆಗೆದುಕೊಳ್ಳಿ. ಅದು ನಮ್ಮ ಒಂದು 15 ಲಕ್ಷ ಜನರಿಗೆ ಸಮ. ಉಳಿದಿದ್ದನ್ನು ನೀವೇ ಲೆಕ್ಕ ಮಾಡಿಕೊಳ್ಳಿ ಎಂದು ಟ್ವೀಟ್​ ಮಾಡಿ ಅಫ್ರಿದಿಗೆ ತಿರುಗೇಟು ನೀಡಿದ್ದಾರೆ.

ಪಿಒಕೆಗೆ ಭೇಟಿ ನೀಡಿದ್ದ ವೇಳೆ ಮೋದಿ ಭಾರತದಲ್ಲಿ ಧಾರ್ಮಿಕ ದೌರ್ಜನ್ಯ ಎಸಗುತ್ತಿದ್ದಾರೆ. ಕೊರೊನಾ ವೈರಸ್​ಗಿಂತ ಕೆಟ್ಟ ರೋಗ ಮೋದಿ ಮನಸ್ಸಿನಲ್ಲಿದೆ ಎಂದು ಅಫ್ರಿದಿ ಹೇಳಿಕೆ ನೀಡಿದ್ದರು.

ಇನ್ನು ಕಾಶ್ಮೀರದಲ್ಲಿ ಅಫ್ರಿದಿ, ಮೋದಿ ಹಾಗೂ ಭಾರತದ ವಿರುದ್ಧ ಮಾತನಾಡಿದ್ದಕ್ಕೆ ಹರ್ಭಜನ್​ ಸಿಂಗ್​ ಕೂಡ ಕಿಡಿಕಾರಿದ್ದು, ಇನ್ಮುಂದೆ ನಮಗೂ ಅಫ್ರಿದಿಗೂ ಸಬಂಧವಿಲ್ಲ ಎಂದು ಹೇಳಿದ್ದಾರೆ.

ಯುವಿ ಕೂಡ ಅಫ್ರಿದಿ ಹೇಳಿಕೆಯನ್ನು ಖಂಡಿಸಿದ್ದಾರೆ. ನಮ್ಮ ಪ್ರಧಾನಮಂತ್ರಿ ವಿರುದ್ಧ ಶಾಹೀದ್​ ಅಫ್ರಿದಿ ಅವರ ಹೇಳಿಕೆ ನನಗೆ ನಿಜಕ್ಕೂ ಬೇಸರ ತಂದಿದೆ. ನಾನೊಬ್ಬ ಜವಾಬ್ದಾರಿಯುತ ನಾಗರಿಕನಾಗಿ ಹಾಗೂ ದೇಶಕ್ಕಾಗಿ ಆಡಿರುವ ನಾವು ಇಂತಹ ಬೇಜಾವಬ್ದಾರಿ ಹೇಳಿಕೆಯನ್ನು ಎಂದಿಗೂ ಸ್ವೀಕರಿಸುವುದಿಲ್ಲ. ನಾವು ಮಾನವೀಯತೆಯ ದೃಷ್ಟಿಯಿಂದ ನಿಮಗಾಗಿ ಮನವಿ ಮಾಡಿದ್ದೆವು. ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ಟ್ವೀಟ್​ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details