ಕರ್ನಾಟಕ

karnataka

ETV Bharat / sports

ಮೊದಲ ಓವರ್​ನಲ್ಲೇ ಹ್ಯಾಟ್ರಿಕ್​​​ ವಿಕೆಟ್​ ಪಡೆದ ಅಂಡರ್​ 19 ತಂಡದ ಕಾರ್ತಿಕ್​​​ ತ್ಯಾಗಿ - ಪ್ರಿಯಂ ಗರ್ಗ್

ಭಾರತ ಅಂಡರ್​ 19 ತಂಡದಲ್ಲಿ ಅವಕಾಶ ಪಡೆದಿರುವ ಉತ್ತರ ಪ್ರದೇಶದ ಕಾರ್ತಿಕ್​ ತ್ಯಾಗಿ ಮೊದಲ ಓವರ್​ನ 2ನೇ ಎಸೆತದಲ್ಲಿ ಫರ್ಹಾನ್​ ಝಾಕಿಲ್​, 3ನೇ ಎಸೆತದಲ್ಲಿ ಸೆದಿಕ್​ ಅಟಲ್​ ಹಾಗೂ 4ನೇ ಎಸೆತದಲ್ಲಿ ಜಮ್ಶಿದ್ ಖಾನ್​ ಅವರನ್ನು ಔಟ್​ ಮಾಡುವ ಮೂಲಕ ಹ್ಯಾಟ್ರಿಕ್​ ಪಡೆದರು.

Kartik tyagi hat trick
Kartik tyagi hat trick

By

Published : Jan 13, 2020, 12:59 PM IST

ಪ್ರಿಟೋರಿಯಾ: ವಿಶ್ವಕಪ್​ ಅಭ್ಯಾಸ ಪಂದ್ಯದಲ್ಲಿ ಭಾರತದ ಕಾರ್ತಿಕ್​ ತ್ಯಾಗಿ ಅಫ್ಘಾನಿಸ್ತಾನದ ವಿರುದ್ಧ ಮೊದಲ ಓವರ್​ನಲ್ಲೇ ಹ್ಯಾಟ್ರಿಕ್​ ವಿಕೆಟ್​ ಪಡೆದು ಮಿಂಚಿದ್ದಾರೆ.

ಹಾಲಿ ಚಾಂಪಿಯನ್ ಆಗಿರುವ ಭಾರತದ ಕಿರಿಯರ ತಂಡ ಅಫ್ಘನ್​ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ ಉತ್ತರ ಪ್ರದೇಶದ ಕಾರ್ತಿಕ್​ ತ್ಯಾಗಿ ಮೊದಲ ಓವರ್​ನ 2ನೇ ಎಸೆತದಲ್ಲಿ ಫರ್ಹಾನ್​ ಝಾಕಿಲ್​, 3ನೇ ಎಸೆತದಲ್ಲಿ ಸೆದಿಕ್​ ಅಟಲ್​ ಹಾಗೂ 4ನೇ ಎಸೆತದಲ್ಲಿ ಜಮ್ಶಿದ್ ಖಾನ್​ ಅವರನ್ನು ಔಟ್​ ಮಾಡುವ ಮೂಲಕ ಹ್ಯಾಟ್ರಿಕ್​ ಪಡೆದರು.

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 255 ರನ್ ​ಗಳಿಸಿದರೆ, ಅಫ್ಘನ್​ ತಂಡ ಭಾರತದ ಬೌಲರ್​ಗಳ ದಾಳಿಗೆ ತತ್ತರಿಸಿ 44 ರನ್​ಗಳಿಗೆ ಆಲೌಟ್​ ಆಗುವ ಮೂಲಕ 211 ರನ್​ಗಳ ಸೋಲನುಭವಿಸಿತ್ತು.

ಉತ್ತರ ಪ್ರದೇಶದ ರೈತನ ಮಗನಾಗಿರುವ ಕಾರ್ತಿಕ್‌ ತ್ಯಾಗಿ ವಿಶ್ವಕಪ್​ಗೂ ಮೊದಲೇ ತನ್ನ ಬೌಲಿಂಗ್​ ಪರಾಕ್ರಮ ತೋರಿಸಿರುವುದು ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಪ್ರಿಯಂ ಗರ್ಗ್​ ನೇತೃತ್ವದ ಭಾರತ ತಂಡ ಜನವರಿ 19ರಂದು ಶ್ರೀಲಂಕಾ ತಂಡದ ವಿರುದ್ಧ ತನ್ನ ವಿಶ್ವಕಪ್​ ಅಭಿಯಾನ ಆರಂಭಿಸಲಿದೆ.

ABOUT THE AUTHOR

...view details