ಬೆಂಗಳೂರು: ವಿಜಯ್ ಹಜಾರೆ ಟ್ರೋಫಿಯಲ್ಲಿ ಅಮೋಘ ಆಟ ಪ್ರದರ್ಶನ ತೋರುತ್ತಿರುವ ಕರ್ನಾಟಕ ತಂಡ ಬುಧವಾರ ಚತ್ತಿಸ್ಘಡ ವಿರುದ್ಧ 79 ರನ್ಗಳ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ನಾಯಕ ಮನೀಷ್ ಪಾಂಡೆ 118 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 142 ರನ್ ಗಳಿಸಿದರೆ ಇವರಿಗೆ ಸಾಥ್ ನೀಡಿದ ರಾಹುಲ್ 81 ರನ್ ಪೇರಿಸಿದರು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ 50 ಓವರ್ಗಳಲ್ಲಿ 285 ರನ್ ಕಲೆ ಹಾಕಿತು.