ಬೆಂಗಳೂರು:ವಿಜಯ್ ಹಜಾರೆ ಟ್ರೋಫಿಯ ತನ್ನ 2ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಬಿಹಾರ ವಿರುದ್ಧ 267 ರನ್ಗಳ ಬೃಹತ್ ಅಂತರದಿಂದ ಗೆದ್ದಿದೆ.
ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಡಕ ತಂಡ ನಾಯಕ ಆರ್ ಸಮರ್ಥ್(158) ಅವರ ಅಮೋಘ ಶತಕ, ದೇವದತ್ ಪಡಿಕ್ಕಲ್(97) ಮತ್ತು ಸಿದ್ಧಾರ್ಥ್(76) ಅವರ ಅರ್ಧಶತಕಗಳ ನೆರವಿನಿಂದ 50 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 354 ರನ್ಗಳಿಸಿತ್ತು.
ನಾಯಕನ ಆಟವಾಡಿದ ರವಿಕುಮಾರ್ ಸಮರ್ಥ್ 144 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ಸಮೇತ ಅಜೇಯ 158 ರನ್ಗಳಿಸಿದರೆ, ದೇವದತ್ ಪಡಿಕ್ಕಲ್ 98 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 97 ರನ್ಗಳಿಗೆ ಔಟ್ ಆಗುವ ಮೂಲಕ 3 ರನ್ಗಳಿಂದ ಶತಕ ವಂಚಿತರಾದರು. ಕೊನೆಯಲ್ಲಿ ಸ್ಫೋಟಕ ಪ್ರದರ್ಶನ ತೋರಿದ ಸಿದ್ಧಾರ್ಥ್ 55 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 76 ರನ್ಗಳಿಸಿದರು.
355 ರನ್ಗಳ ಗುರಿಯನ್ನು ಬೆನ್ನತ್ತಿದ ಬಿಹಾರ ತಂಡ ಕೇವಲ 87 ರನ್ಗಳಿಗೆ ಆಲೌಟ್ ಆಗುವ ಮೂಲಕ 267 ರನ್ಗಳ ಸೋಲು ಕಂಡಿತು. ಮಾರಕ ಬೌಲಿಂಗ್ ದಾಳಿ ನಡೆಸಿದ ಪ್ರಸಿದ್ ಕೃಷ್ಣ 17ಕ್ಕೆ4, ಶ್ರೇಯಸ್ ಗೋಪಾಲ್ 22ಕ್ಕೆ 2, ಮಿಥುನ್ 7ಕ್ಕೆ 2 ವಿಕೆಟ್ ಪಡೆದು ಬೃಹತ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನು ಓದಿ:15 ವರ್ಷದ ಬಳಿಕ ಐದು ವಿಕೆಟ್.. ಕೇರಳ ತಂಡದಲ್ಲಿ ಶ್ರೀಶಾಂತ್ ಮಿಂಚು!