ಕರ್ನಾಟಕ

karnataka

By

Published : Mar 3, 2021, 4:40 PM IST

ETV Bharat / sports

ವಿಜಯ್ ಹಜಾರೆ ಟ್ರೋಫಿ ನಾಕೌಟ್ ಪಂದ್ಯಗಳ ವೇಳಾಪಟ್ಟಿ: ಕರ್ನಾಟಕಕ್ಕೆ ಕೇರಳ ಎದುರಾಳಿ

ಫೆಬ್ರವರಿ 20 ರಿಂದ ಆರಂಭವಾಗಿದ್ದ ವಿಜಯ್ ಹಜಾರೆ ಟ್ರೋಫಿಯಲ್ಲಿ 38 ತಂಡಗಳು 10 ದಿನಗಳ ಅವಧಿಯಲ್ಲಿ 6 ಗುಂಪು, 6 ಸ್ಥಳಗಳಲ್ಲಿ ಸೆಣಸಾಡಿವೆ. ನಾಕೌಟ್ ಹಂತದ ಪಂದ್ಯಗಳು ದೆಹಲಿಯಲ್ಲಿ ನಡೆಯಲಿವೆ.

ವಿಜಯ್ ಹಜಾರೆ ಟ್ರೋಫಿ
ವಿಜಯ್ ಹಜಾರೆ ಟ್ರೋಫಿ

ಮುಂಬೈ:2021ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕ್ವಾರ್ಟರ್​ ಫೈನಲ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದ್ದು, 8 ತಂಡಗಳ ಬದಲಾಗಿ 9 ತಂಡಗಳು ಅರ್ಹತೆಗಳಿಸಿವೆ.

ಕರ್ನಾಟಕ, ಕೇರಳ, ಗುಜರಾತ್​, ಮುಂಬೈ, ಸೌರಾಷ್ಟ್ರ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಡೆಲ್ಲಿ ತಂಡಗಳು ನಾಕೌಟ್​ ಹಂತಕ್ಕೆ ಪ್ರವೇಶ ಪಡೆದಿವೆ.

ಕರ್ನಾಟಕ, ಗುಜರಾತ್​, ಆಂಧ್ರ ಪ್ರದೇಶ, ಸೌರಾಷ್ಟ್ರ, ಮುಂಬೈ ತಂಡಗಳು 5 ಗುಂಪುಗಳಲ್ಲಿ ಅಗ್ರಸ್ಥಾನ ಪಡೆದು ನಾಕೌಟ್​ಗೆ ಎಂಟ್ರಿ ಕೊಟ್ಟಿವೆ. ಇನ್ನು ಲೀಗ್​ನಲ್ಲಿ ತಲಾ 16 ಅಂಕ ಪಡೆದು ರನ್​ರೇಟ್​ ಆಧಾರದ ಮೇಲೆ ಉತ್ತರ ಪ್ರದೇಶ, ಕೇರಳ ಮತ್ತು ಡೆಲ್ಲಿ ತಂಡಗಳು ಅರ್ಹತೆ ಪಡೆದರೆ, ಉತ್ತರಾಖಂಡ ತಂಡ ಪ್ಲೇಟ್​ ಗುಂಪಿನಲ್ಲಿ 5ಕ್ಕೆ 5 ಜಯ ಪಡೆದು ಕ್ವಾರ್ಟರ್‌ ಫೈನಲ್ ಪ್ರವೇಶಿಸಿದೆ.

​ಕ್ವಾರ್ಟರ್​ ಫೈನಲ್ ಪಂದ್ಯದ ವೇಳಾಪಟ್ಟಿ ಹೀಗಿದೆ..

ಮಾರ್ಚ್​ 7: ಡೆಲ್ಲಿ vs ಉತ್ತರಖಂಡ (ಫ್ರೀ ಕ್ವಾರ್ಟರ್​ ಫೈನಲ್​)

ಮಾರ್ಚ್​ 8: ಕರ್ನಾಟಕ vs ಕೇರಳ, ಗುಜರಾತ್​ vs ಆಂಧ್ರ ಪ್ರದೇಶ

ಮಾರ್ಚ್​ 9: ಮುಂಬೈ vs ಸೌರಾಷ್ಟ್ರ, ಉತ್ತರ ಪ್ರದೇಶ vs (ಫ್ರೀ ಕ್ವಾರ್ಟರ್​ನಲ್ಲಿ ಗೆದ್ದ ತಂಡ)

ಮಾರ್ಚ್​ 11: ಸೆಮಿಫೈನಲ್ಸ್​ ಪಂದ್ಯಗಳು

ಮಾರ್ಚ್​ 14 : ಫೈನಲ್ ಪಂದ್ಯ

ಇದನ್ನೂ ಓದಿ: ಪೂಜಾರ ಬಗ್ಗೆ ಟೀಕೆ ಸರಿಯಲ್ಲ, ಆತ ವಿಶ್ವದರ್ಜೆಯ ಬ್ಯಾಟ್ಸ್​ಮನ್​: ವಿರಾಟ್​ ಕೊಹ್ಲಿ

ABOUT THE AUTHOR

...view details