ಲಾರ್ಡ್ಸ್: ಭಾರತದ ವಿರುದ್ಧ ಸೆಮಿಫೈನಲ್ನಲ್ಲಿ ಧೋನಿಯನ್ನು ಅದ್ಭುತ ರನ್ಔಟ್ ಮೂಲಕ ಕಿವೀಸ್ ತಂಡವನ್ನು ಫೈನಲ್ಗೇರುವಂತೆ ಮಾಡಿದ್ದ ಮಾರ್ಟಿನ್ ಗಪ್ಟಿಲ್ ಫೈನಲ್ನಲ್ಲಿ ಓವರ್ ಥ್ರೋ ಹಾಗೂ ಕೊನೆಯಲ್ಲಿ ಒಂದು ಬಾಲಿಗೆ 2 ರನ್ ತೆಗೆಯಲಾರದೆ ಕಿವೀಸ್ ಪಾಲಿಗೆ ವಿಲನ್ ಆಗಿದ್ದಾರೆ.
ಭಾರತದ ವಿರುದ್ಧ ವಿರುದ್ಧ ಧೋನಿ ರನ್ಔಟ್ ಮಾಡಿ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಗಪ್ಟಿಲ್, ಇದೀಗ ಪಂದ್ಯದ ವೇಳೆ ಸೂಪರ್ ಓವರ್ನಲ್ಲಿ ಒಂದು ಎಸೆತಕ್ಕೆ ಎರಡು ರನ್ ತೆಗೆಯುವ ವೇಳೆ ತಾವೇ ರನ್ಔಟ್ ಆಗುವ ಮೂಲಕ ಕಿವೀಸ್ ಅಭಿಮಾನಿಗಳ ಚೊಚ್ಚಲ ವಿಶ್ವಕಪ್ ಕನಸು ನುಚ್ಚುನೂರು ಮಾಡಿದ್ದಾರೆ.
ಅಲ್ಲದೇ ಇದಕ್ಕೂ ಮೊದಲು ಇಂಗ್ಲೆಂಡ್ ಗೆಲುವಿಗೆ 3 ಎಸೆತಕ್ಕೆ 9 ರನ್ಗಳ ಅಗತ್ಯವಿದ್ದಾಗ ಸ್ಟೋಕ್ಸ್ ಮಿಡ್ ಆನ್ ನಲ್ಲಿ ಬಾರಿಸಿದ ಚೆಂಡನ್ನು ಕೀಪರ್ಗೆ ಎಸೆದ ಚೆಂಡು ಸ್ಟೋಕ್ಸ್ ಬ್ಯಾಟ್ಗೆ ಬಡಿದು ಬೌಂಡರಿ ಸೇರಿತ್ತು. ಇದು ಕಿವೀಸ್ ಪಾಲಿಗೆ ಶಾಪವಾದರೆ, ಇಂಗ್ಲೆಂಡ್ಗೆ ವಿಶ್ವಕಪ್ ತಂದು ಕೊಡಲು ನೆರವಾಯಿತು.
ಗಪ್ಟಿಲ್ರನ್ನು ಟ್ರೋಲ್ ಮಾಡಿದ ಭಾರತೀಯ ಫ್ಯಾನ್ಸ್:
ಧೋನಿಯನ್ನು ಔಟ್ ಮಾಡಿ ಭಾರತ ತಂಡವನ್ನು ಸೆಮಿಫೈನಲ್ನಿಂದ ಹೊರಗಟ್ಟಿದ್ದ ಗಪ್ಟಿಲ್ ತಾವೇ ರನ್ ಔಟ್ ಆಗುವ ಮೂಲಕ ತಮ್ಮದೇ ತಂಡದ ಸೋಲಿಗೆ ಕಾರಣರಾದರು ಎಂದು ಟ್ವಿಟರ್ನಲ್ಲಿ ಟ್ರೋಲ್ ಮಾಡಿದ್ದಾರೆ. #karma ಎಂಬ ಹ್ಯಾಸ್ಟ್ಯಾಗ್ ಮೂಲಕ ಕರ್ಮ ಯಾರನ್ನು ಬಿಡುವುದಿಲ್ಲ ಎಂದು ಗಪ್ಟಿಲ್ರನ್ನು ಟ್ರೋಲ್ ಮಾಡುತ್ತಿದ್ದಾರೆ. ಆದರೆ, ಇದನ್ನು ಭಾರತೀಯರೇ ಟೀಕಿಸಿದ್ದು ಆಟ ಎಂದ ಮೇಲೆ ಇಂತಹ ಘಟನೆಗಳು ನಡೆಯುತ್ತವೆ. ಇದಕ್ಕಾಗಿ ಆಟಗಾರರನ್ನು ದೂಷಣೆ ಮಾಡಬಾರದು ಎಂದಿ ಟ್ರೋಲ್ ಮಾಡಿದವರ ವಿರುದ್ಧ ಕಿಡಿಕಾರಿದ್ದಾರೆ.