ಕರ್ನಾಟಕ

karnataka

ಫೆಬ್ರವರಿಯಲ್ಲಿ ಆರಂಭವಾಗಿ ನವೆಂಬರ್​​ನಲ್ಲಿ ಅಂತ್ಯಗೊಂಡ ಪಿಎಸ್​​​ಎಲ್​: ಮೊದಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ ಕರಾಚಿ

By

Published : Nov 18, 2020, 1:32 PM IST

5ನೇ ಪಾಕಿಸ್ತಾನ ಪ್ರೀಮಿಯರ್​ ಲೀಗ್​​ನಲ್ಲಿ ಫೈನಲ್​ ಪಂದ್ಯದಲ್ಲಿ ಲಾಹೋರ್​ ಖಲಾಂಡರ್ಸ್ ತಂಡವನ್ನು ಸೋಲಿಸಿ ಕರಾಚಿ ಕಿಂಗ್ಸ್​​​ ತಂಡ ಮೊದಲ ಬಾರಿಗೆ ಚಾಂಪಿಯನ್​ ಆಗಿ ಹೊರಹೊಮ್ಮಿತು. ಖಲಾಂಡರ್ಸ್ ತಂಡ ರನ್ನರ್​ಅಪ್​​​​​​ ಸಮಾಧಾನ ಪಡೆದುಕೊಂಡಿತು. ಈ ಎರಡೂ ತಂಡಗಳು ಇದೇ ಮೊದಲ ಬಾರಿಗೆ ತಲುಪಿದ್ದವು..

Karachi Kings are champions of PSL 5
ಮೊದಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ ಕರಾಚಿ

ಕರಾಚಿ (ಪಾಕಿಸ್ತಾನ): ಮಂಗಳವಾರ ರಾತ್ರಿ ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಸೋಹೈಲ್​​​​ ಅಖ್ತರ್​ ನಾಯಕತ್ವದ ಲಾಹೋರ್​ ಖಲಾಂಡರ್ಸ್​ ತಂಡವನ್ನು ಮಣಿಸುವ ಮೂಲಕ ಇಮಾದ್​ ವಾಸೀಂ ನಾಯಕತ್ವದ ಕರಾಚಿ ಕಿಂಗ್ಸ್​​​ ತಂಡ ಪಾಕಿಸ್ತಾನ ಪ್ರೀಮಿಯರ್ ಲೀಗ್​​​ನಲ್ಲಿ (ಪಿಎಸ್​​​ಎಲ್-5ನೇ ಆವೃತ್ತಿ​​​) ಮೊದಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿತು.

ಪಿಎಸ್​​ಎಲ್​ನ 5 ಆವೃತ್ತಿಗಳಲ್ಲಿ ಈ ಎರಡು ತಂಡಗಳು ಇದೇ ಮೊದಲ ಬಾರಿಗೆ ಫೈನಲ್​ ತಲುಪಿದ್ದವು. ಕರಾಚಿ ಕಿಂಗ್ಸ್​​​ ತಂಡ ಚಾಂಪಿಯನ್​​ ಆಗಿ ಹೊರ ಹೊಮ್ಮಿದರೆ, ಖಲಾಂಡರ್ಸ್ ತಂಡ ರನ್ನರ್​ಅಪ್​​​​​​ಗೆ ತೃಪ್ತಿಗೊಂಡಿತು.

ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಖಲಾಂಡರ್ಸ್​ 20 ಓವರ್​ಗಳ ಮುಕ್ತಾಯಕ್ಕೆ 7 ವಿಕೆಟ್​ ಕಳೆದುಕೊಂಡು ಎದುರಾಳಿ ಕರಾಚಿ ತಂಡಕ್ಕೆ 134 ರನ್​​ಗಳ ಸಾಧಾರಣ ಮೊತ್ತ ನೀಡಿತು. ಮಸ್ಕೂದ್​, ಅರ್ಷಾದ್​​ ಇಕ್ಬಾಲ್​ ಮತ್ತು ಯು.ಆಸೀಫ್​​​​ಗೆ ತಲಾ 2 ಮತ್ತು ನಾಯಕ ವಾಸೀಂ 1 ವಿಕೆಟ್​​ ಪಡೆದುಕೊಂಡಿದ್ದಾರೆ.

ಬೌಲರ್​​​ಗಳ ಅಬ್ಬರದ ದಾಳಿಗೆ ಸೋಹೈಲ್​​​​ ಪಡೆ ಅಲ್ಪ ಮೊತ್ತಕ್ಕೆ ಕುಸಿಯಿತು. ತಮೀಮ್​ (35), ಫಕಾರ್​ ಜಮಾನ್ (27), ಹಫೀಜ್​​ ಸೇರಿದಂತೆ ಪ್ರಮುಖ ಆಟಗಾರರು ನೀರಸ ಪ್ರದರ್ಶನ ತೋರಿದರು.

ಕರಾಚಿ ತಂಡ 18.4 ಓವರ್​ಗಳಲ್ಲಿ ಐದು ವಿಕೆಟ್​ ಕಳೆದುಕೊಂಡು ಖಲಾಂಡರ್ಸ್​​ ನೀಡಿದ ಗುರಿಯನ್ನು ಬೆನ್ನಟ್ಟಿತು. ಬಾಬರ್​ ಅಜಾಮ್​ ಅಮೋಘ ಅರ್ಧಶತಕ (63) ಬಾರಿಸಿ ಔಟಾಗದೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಬಾಬರ್​​ ಅಜಾಮ್​​​ಗೆ ಸರಣಿ ಶ್ರೇಷ್ಠ, ಪಂದ್ಯಶ್ರೇಷ್ಠ ಮತ್ತು ಬೆಸ್ಟ್​​​​ ಬ್ಯಾಟ್ಸ್​​​ಮೆನ್ ಪ್ರಶಸ್ತಿ, ​​ಶಾಹೀನ್​​​ ಶಾ ಆಫ್ರೀದಿಗೆ ಬೆಸ್ಟ್​​ ಬೌಲರ್​ ಪ್ರಶಸ್ತಿ, ಬೆನ್​ ಡಂಕ್​​​ ಅವರು ಬೆಸ್ಟ್​ ವಿಕೆಟ್​ ಕೀಪರ್​ ಪ್ರಶಸ್ತಿಗೆ ಪಾತ್ರರಾದರು. ಮುಲ್ತಾನ್​ ಸುಲ್ತಾನ್​ ತಂಡಕ್ಕೆ ಸ್ಪಿರಿಟ್​​ ಆಫ್​ ಕ್ರಿಕೆಟ್​ ಅವಾರ್ಡ್​​ಗೆ ಲಭಿಸಿತು.

ಫೆಬ್ರುವರಿಯಲ್ಲಿ ಟೂರ್ನಿ ಆರಂಭ: ನವೆಂಬರ್​​ನಲ್ಲಿ ಅಂತ್ಯ

ಪಿಎಸ್​​ಎಲ್​​-5 ಟೂರ್ನಿ ಆರಂಭವಾಗಿದ್ದು, ಫೆಬ್ರುವರಿ 20ರಂದು. ಕ್ವೆಟ್ಟಾ ಗ್ಲಾಡಿಯೇಟರ್ಸ್​​ ಮತ್ತು ಇಸ್ಲಾಮಾಬಾದ್​ ಯುನೈಟೆಡ್​ ತಂಡಗಳ ನಡುವೆ ಮೊದಲ ಪಂದ್ಯ ನಡೆದಿತ್ತು. ನಂತರ ಕೊರೊನಾ ಕಾರಣ ಮಾರ್ಚ್​​​ 17ರಂದು ನಡೆಯಬೇಕಿದ್ದ ಸೆಮಿಫೈನಲ್​ ಪಂದ್ಯಗಳನ್ನು ಮುಂದೂಡಲಾಯಿತು.

ನವೆಂಬರ್​​ 14ರಂದು ಪುನರ್​​ ಆರಂಭವಾದ ಟೂರ್ನಿಯ ಮೊದಲ ಪಂದ್ಯ ಕ್ವಾಲಿಫೈಯರ್​ ಮತ್ತು ಎಲಿಮಿನೇಟರ್ ನಡೆಯಿತು. ಆಗ ಕರಾಚಿ ನೇರವಾಗಿ ಫೈನಲ್​ ತಲುಪಿತು. ನಂತರ 2ನೇ ನ.15ರಂದು ನಡೆದ 2ನೇ ಎಲಿಮಿನೇಟರ್ ಪಂದ್ಯದಲ್ಲಿ ಲಾಹೋರ್​ ಖಲಾಂಡರ್ಸ್ ಗೆದ್ದು ಫೈನಲ್​​ಗೇರಿತು. ಅಂತಿಮವಾಗಿ ಮಂಗಳವಾರ ಜರುಗಿದ ಫೈನಲ್​​​ನಲ್ಲಿ ಕರಾಚಿ ಕಿಂಗ್ಸ್​​​​, ಲಾಹೋರ್​ ವಿರುದ್ಧ ಜಯಿಸಿ ಕಪ್​ ತಮ್ಮದಾಗಿಸಿಕೊಂಡಿತು.

ABOUT THE AUTHOR

...view details