ನವದೆಹಲಿ: ಹರ್ಯಾಣದಲ್ಲಿ ಈ ವರ್ಷದಿಂದ ಆರಂಭವಾಗುತ್ತಿರುವ ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಮೊದಲ ಕುಲಪತಿಯಾಗಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರನ್ನು ಹರ್ಯಾಣ ಸರ್ಕಾರ ನೇಮಕ ಮಾಡಿದೆ.
ಈ ಬಗ್ಗೆ ಹರಿಯಾಣ ಕ್ಯಾಬಿನೆಟ್ ಸಚಿವ ಅನಿಲ್ ವಿಜ್ ಅವರು ಟ್ವಿಟರ್ನಲ್ಲಿ ಘೋಷಣೆ ಮಾಡಿದ್ದಾರೆ.

ಸೋನಪತ್ನಲ್ಲಿ ಆರಂಭವಾಗಲಿರುವ ಮೊದಲ ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಕಪಿಲ್ ದೇವ್ ಅವರನ್ನು ಕುಲಪತಿಯನ್ನಾಗಿ ನೇಮಿಸಲಾಗಿದೆ ಎಂದು ವಿಜ್ ಅವರು ಟ್ವೀಟ್ ಮಾಡಿದ್ದಾರೆ.
ಜುಲೈ 16ರಂದು ಹರಿಯಾಣದ ಸಚಿವ ಸಂಪುಟದಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸಲು ಅನುಮತಿ ನೀಡಲಾಗಿತ್ತು. ಈ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಹಾಗೂ ತರಬೇತಿ ಹಾಗೂ ಕ್ರೀಡಾ ವಿಜ್ಞಾನದ ಬಗ್ಗೆ ಅಕಾಡೆಮಿಯಲ್ಲಿ ಅಧ್ಯಯನ ನಡೆಸಲಾಗುತ್ತದೆ ಎಂದು ವಿಜ್ ತಿಳಿಸಿದ್ದಾರೆ.