ಕರ್ನಾಟಕ

karnataka

ETV Bharat / sports

ಚೇತರಿಸಿಕೊಂಡ ಕಪಿಲ್​ ದೇವ್​: ವಿಡಿಯೋ ಹರಿಬಿಟ್ಟು ಧನ್ಯವಾದ ಹೇಳಿದ ವಿಶ್ವಕಪ್​ ಗೆದ್ದುಕೊಟ್ಟ ಹೀರೋ

ಹಠಾತ್‌ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಪಿಲ್ ದೇವ್​ ಸದ್ಯ ಚೇತರಿಸಿಕೊಂಡಿದ್ದು, ವಿಡಿಯೋ ಹರಿಬಿಟ್ಟು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

Kapil Dev Thanks Fans
Kapil Dev Thanks Fans

By

Published : Oct 30, 2020, 5:26 AM IST

ನವದೆಹಲಿ: ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಚೊಚ್ಚಲ ವಿಶ್ವಕಪ್​ ಗೆದ್ದುಕೊಟ್ಟ ಹೀರೋ ಕಪಿಲ್​ ದೇವ್​ ಇದೀಗ ಚೇತರಿಸಿಕೊಂಡಿದ್ದು, ಇದರ ಬೆನ್ನಲ್ಲೇ ವಿಡಿಯೋ ಹರಿಬಿಟ್ಟು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಎದೆನೋವಿನ ಕಾರಣ ಅಕ್ಟೋಬರ್​ 23ರಂದು ದೆಹಲಿಯ ಪೋರ್ಟಿಸ್​​ ಎಸ್ಕಾರ್ಟ್​​ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಇದಾದ ಬಳಿಕ ಚೇತರಿಸಿಕೊಂಡಿರುವ ಅವರು ಡಿಸ್ಚಾರ್ಜ್​ ಆಗಿದ್ದು, ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

ಮನೆಯಿಂದಲೇ ವಿಡಿಯೋ ಹರಿಬಿಟ್ಟಿರುವ 1983 ವಿಶ್ವಕಪ್​ ವಿಜೇತ ತಂಡದ ಕ್ಯಾಪ್ಟನ್​ ಕಪಿಲ್​ ದೇವ್​, ಇದೀಗ ನಾನು ತುಂಬಾ ಆರೋಗ್ಯವಾಗಿದ್ದೇನೆ. ನಿಮ್ಮ ಹಾರೈಕೆ ಮತ್ತು ಕಾಳಜಿಗೆ ನಾನು ಧನ್ಯವಾದ ತಿಳಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ವಿಡಿಯೋವನ್ನ ಟೀಂ ಇಂಡಿಯಾ ಮಾಜಿ ಆಟಗಾರ ಸುರೇಶ್​ ರೈನಾ ಶೇರ್​ ಮಾಡಿದ್ದಾರೆ.

1983ರ ವಿಶ್ವಕಪ್​ ಗೆದ್ದ ತಂಡದ ಭೇಟಿಗೆ ಕಪಿಲ್​ ಉತ್ಸುಕ

1983ರಲ್ಲಿ ಭಾರತಕ್ಕೆ ಚೊಚ್ಚಲ ವಿಶ್ವಕಪ್​ ಗೆದ್ದು ಕೊಟ್ಟಿರುವ ತಂಡದ ನಾಯಕನಾಗಿದ್ದ ಕಪಿಲ್​ ದೇವ್​ ಇದೀಗ ಆ ತಂಡದ ಎಲ್ಲ ಸದಸ್ಯರ ಭೇಟಿಗೆ ನಿರ್ಧರಿಸಿದ್ದಾರೆ. 1983ರ ನನ್ನ ಕುಟುಂಬದವರೇ, ನಿಮ್ಮನ್ನೆಲ್ಲಾ ಭೇಟಿ ಮಾಡವುದಕ್ಕೆ ನಾನು ತುಂಬಾ ಉತ್ಸುಕನಾಗಿದ್ದೇನೆ. ಆ ಸಂದರ್ಭ ನನಗೆ ತುಂಬಾ ಆಹ್ಲಾದಕರವಾಗಿರುತ್ತದೆ. ನಾನು ಆರಾಮವಾಗಿದ್ದೇವೆ. ನನ್ನ ಆರೋಗ್ಯ ಉತ್ತಮವಾಗಿದೆ. ನನ್ನ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಧನ್ಯವಾದಗಳು. ನಾವೆಲ್ಲರೂ ಆದಷ್ಟು ಬೇಗ ಭೇಟಿಯಾಗುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ABOUT THE AUTHOR

...view details