ಕರ್ನಾಟಕ

karnataka

ಕಪಿಲ್​ ದೇವ್​ ನೇತೃತ್ವದ ಸಲಹಾ ಸಮಿತಿಯಿಂದ ಟೀಂ ಇಂಡಿಯಾ ಕೋಚ್​ ಆಯ್ಕೆ...?

By

Published : Jul 18, 2019, 5:43 AM IST

ಟೀಮ್​​​​ ಇಂಡಿಯಾದ ಸಲಹಾ ಸಮಿತಿಗೆ ಭಾರತದ ಲೆಜೆಂಡ್ ಮಾಜಿ ಆಟಗಾರ ಕಪಿಲ್ ದೇವ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ.

ಕಪಿಲ್​ ದೇವ್

ಮುಂಬೈ: ಭಾರತದ ಸಿನೀಯರ್​ ಪುರುಷರ ತಂಡದ ಕೋಚ್​ ಹುದ್ದೆಗಾಗಿ ಬಿಸಿಸಿಐ ಈಗಾಗಲೇ ಅರ್ಜಿ ಆಹ್ವಾನ ಮಾಡಿದ್ದು, ವೆಸ್ಟ್​ ಇಂಡೀಸ್​​ ಪ್ರವಾಸ​ ಮುಕ್ತಾಯಗೊಳ್ಳುತ್ತಿದ್ದಂತೆ ಹೊಸ ಕೋಚ್​ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ.

ಇದರ ಮಧ್ಯೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಟೀಮ್ ಇಂಡಿಯಾದ ಸಲಹಾ ಸಮಿತಿಗೆ ಭಾರತದ ಮಾಜಿ ಆಟಗಾರ ಕಪಿಲ್ ದೇವ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಮುಂದಿನ ಎರಡು ದಿನಗಳಲ್ಲಿ ಈ ನಿರ್ಧಾರ ಹೊರಬೀಳಲಿದ್ದು, ಒಂದು ವೇಳೆ ಅವರು ಮುಖ್ಯಸ್ಥರಾಗಿ ಆಯ್ಕೆಯಾದರೆ ನೂತನ ಕೋಚ್ ಅನ್ನು ಅವರೇ ಆಯ್ಕೆ ಮಾಡಲಿದ್ದಾರೆ.

ಪ್ರಸ್ತುತ ಈ ಸಲಹಾ ಸಮಿತಿಯಲ್ಲಿ, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಸದಸ್ಯರಾಗಿದ್ದು, ಈ ಸಮಿತಿ ಕಪಿಲ್ ದೇವ್ ಅವರನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲು ಈಗಾಗಲೇ ತೀರ್ಮಾಣ ಕೈಗೊಳ್ಳಲಾಗಿದೆ. ಒಂದು ವೇಳೆ ಕಪಿಲ್​ ದೇವ್​ ಕೋಚ್​ ನೇಮಕ ಮಾಡುವ ಜವಾಬ್ದಾರಿ ಹೊತ್ತುಕೊಂಡರೆ ರವಿಶಾಸ್ತ್ರಿಗೆ ಕೊಕ್​ ನೀಡಬಹುದು ಎಂದು ತಿಳಿದು ಬಂದಿದೆ.

ಸುಪ್ರೀಂ ಕೋರ್ಟ್​ ನೇಮಕ ಮಾಡಿರುವ ನಿರ್ವಾಹಕರ ಸಮಿತಿಯ ಪ್ರಕಾರ ಕಪಿಲ್​ ದೇವ್​, ಅನ್ಶುಮಾನ್ ಗಾಯಕ್ವಾಡ್​ ಮತ್ತು ಶಾಂತಾ ರಂಗಸ್ವಾಮಿ ನೇತೃತ್ವದ ಸಮಿತಿ ಹೊಸ ಕೋಚ್​ ಆಯ್ಕೆ ಮಾಡಲಿ ಎಂಬುದು ಅವರ ಆಶಯವಾಗಿದೆ. ಉಳಿದಂತೆ ಬಿಸಿಸಿಐ ಸಿಇಓ ರಾಹುಲ್​ ಜೋಹ್ರಾ ಸಹ ಸಿಬ್ಬಂದಿ ಆಯ್ಕೆ ಮಾಡಲಿ ಎಂಬುದು ಇವರ ವಾದವಾಗಿದೆ.

ABOUT THE AUTHOR

...view details