ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾ ಕೋಚ್​ ಆಯ್ಕೆ ಜವಾಬ್ದಾರಿ ಕಪಿಲ್ ​ದೇವ್ ಹೆಗಲಿಗೆ - undefined

ಕಪಿಲ್​ ದೇವ್​ ನೇತೃತ್ವದ ಸಲಹಾ ಸಮಿತಿ ಭಾರತ ತಂಡದ ಮುಖ್ಯ ಕೋಚ್​ ಅವರನ್ನ ಆಯ್ಕೆ ಮಾಡಲಿದೆ.

ಕಪಿಲ್ ​ದೇವ್

By

Published : Jul 26, 2019, 6:02 PM IST

ನವದೆಹಲಿ:ಟೀಂ​​​​ ಇಂಡಿಯಾ ಕ್ರಿಕೆಟ್ ಸಲಹಾ ಸಮಿತಿಗೆ ಭಾರತದ ಲೆಜೆಂಡ್ ಕ್ರಿಕೆಟರ್ ಮಾಜಿ ಆಟಗಾರ ಕಪಿಲ್ ದೇವ್ ಅವರನ್ನು ನೇಮಕ ಮಾಡಲಾಗಿದೆ.

ಕಪಿಲ್​ ದೇವ್​ ನೇತೃತ್ವದ ಸಲಹಾ ಸಮಿತಿಯೇ ಭಾರತ ತಂಡದ ಮುಖ್ಯ ಕೋಚ್​ ಅವರನ್ನ ಆಯ್ಕೆ ಮಾಡಲಿದೆ. ಕಪಿಲ್​ ಅಲ್ಲದೆ ಈ ಸಮಿತಿಯಲ್ಲಿ ಮಹಿಳಾ ಕ್ರಿಕೆಟ್​ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ​ ಮತ್ತು ಟೀಂ ಇಂಡಿಯಾ ಮಾಜಿ ಕೋಚ್ ಅನ್ಶುಮಾನ್ ಗಾಯಕ್ವಾಡ್ ಈ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಈ ಮೂವರ ಸಮಿತಿಯೇ ಆಗಸ್ಟ್​ ತಿಂಗಳ ಮಧ್ಯ ಭಾಗದಲ್ಲಿ ಸಂದರ್ಶನ ನಡೆಸುವ ಮೂಲಕ ಟೀಂ ಇಂಡಿಯಾಕ್ಕೆ ನೂತನ ಕೋಚ್​ ಆಯ್ಕೆ ಮಾಡಲಿದೆ ಎಂದು ಬಿಸಿಸಿಐ ನಿರ್ವಾಹಕರ ಸಮಿತಿ (ಸಿಒಎ) ಅಧ್ಯಕ್ಷ ವಿನೋದ್ ರೈ ತಿಳಿಸಿದ್ದಾರೆ.

ಸದ್ಯ ಟೀಂ ಇಂಡಿಯಾ ಕೋಚ್ ಆಗಿರುವ ರವಿ ಶಾಸ್ತ್ರಿ ಅವರ ಗುತ್ತಿಗೆ ಅವಧಿ ಮುಗಿದಿದ್ದರೂ, ವೆಸ್ಟ್​ ಇಂಡೀಸ್​ ಟೂರ್ನಿ ಮುಗಿಯುವ ವರೆಗೆ ಶಾಸ್ತ್ರಿ ಅವರ ಗುತ್ತಿಗೆ ಅವಧಿಯನ್ನ ವಿಸ್ತರಿಸಿ ಬಿಸಿಸಿಐ ಆದೇಶ ನೀಡಿತ್ತು.

ಕಪಿಲ್​ ದೇವ್​ ನೇತೃತ್ವದ ತಂಡ ಟೀಂ ಇಂಡಿಯಾ ಮುಖ್ಯ ಕೋಚ್​ ಅವರನ್ನ ಆಯ್ಕೆ ಮಾಡುತ್ತದೆ ಎಂದು ಹೇಳಲಾಗಿದೆ. ಆದರೆ ಅದೇ ಸಮಿತಿಯ ಸದಸ್ಯರಾಗಿರುವ ಮಾಜಿ ಕ್ರಿಕೆಟ್ ಆಟಗಾರರಾದ ಸೌರವ್​ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಮತ್ತು ಸಚಿನ್​ ತೆಂಡೂಲ್ಕರ್​ ಪಾತ್ರದ ಬಗ್ಗೆ ವಿವರಣೆ ನೀಡಿಲ್ಲ.

For All Latest Updates

TAGGED:

ABOUT THE AUTHOR

...view details