ಕರ್ನಾಟಕ

karnataka

ETV Bharat / sports

ಮೊದಲ ಮಗುವಿನ ನಿರೀಕ್ಷೆ.. ದ್ವಿತೀಯ ಟೆಸ್ಟ್​ಗೆ ಕೇನ್ ವಿಲಿಯಮ್ಸನ್​ ಗೈರು - ವೆಸ್ಟ್​ ಇಂಡೀಸ್ vs ನ್ಯೂಜಿಲ್ಯಾಂಡ್

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ದ್ವಿಶತಕ ಬಾರಿಸುವ ಮೂಲಕ ತಂಡ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದರು..

Kane Williamson to miss 2nd Test vs West Indies
ಕೇನ್ ವಿಲಿಯಮ್ಸನ್

By

Published : Dec 10, 2020, 11:00 PM IST

ವೆಲ್ಲಿಂಗ್ಟನ್ :ಕಿವೀಸ್ ಕ್ರಿಕೆಟಿಗ ಕೇನ್ ವಿಲಿಯಮ್ಸನ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ವಿಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ವಿಲಿಯಮ್ಸನ್ ಅಲಭ್ಯರಾಗಲಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೆಗೆದುಕೊಂಡ ನಿರ್ಧಾರದಂತೆ ಮಗುವಿನ ಜನನದ ಸಮಯದಲ್ಲಿ ಪತ್ನಿ ಜೊತೆ ಸಮಯ ಕಳೆಯಲು ವಿಲಿಯಮ್ಸನ್ ನಿಶ್ಚಯಿಸಿದ್ದಾರೆ. ಕೇನ್ ಅವರ ಈ ನಿರ್ಧಾರವನ್ನು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಕೋಚ್ ಗ್ಯಾರಿ ಸ್ಟೀಡ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ನ್ಯೂಜಿಲೆಂಡ್ ಕ್ರಿಕೆಟ್‌ ಅಧಿಕೃತ ಟ್ವಿಟರ್ ಖಾತೆ ಪೋಸ್ಟ್ ಮಾಡಿರುವ ವಿಡಿಯೋ ಸಂದೇಶದಲ್ಲಿ, ಮೊದಲ ಮಗುವಿನ ಜನನದ ಹಿನ್ನೆಲೆ ಪತ್ನಿ ಸಾರಾ ರಹೀಮ್ ಜೊತೆಗೆ ಇರಲು ಕೇನ್ ವಿಲಿಯಮ್ಸನ್ ಬಯಸಿದ್ದಾರೆ ಎಂದು ಕೋಚ್ ತಿಳಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ದ್ವಿಶತಕ ಬಾರಿಸುವ ಮೂಲಕ ತಂಡ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದರು.

"ವಿಲಿಯಮ್ಸನ್​ ಬದಲಿಗೆ ಟಾಮ್ ಲ್ಯಾಥಮ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿಂದೆಯೂ ಅವರು ಟೆಸ್ಟ್ ತಂಡದ ನಾಯಕನಾಗಿ ಟೀಂ ಮುನ್ನಡೆಸಿದ್ದರು. ತಮ್ಮ ಮೇಲಿನ ಜವಾಬ್ಧಾರಿಯನ್ನು ಅವರು ತಾಳ್ಮೆಯಿಂದ ವಹಿಸಿಕೊಳ್ಳಲಿದ್ದಾರೆ.

ತಂಡದಲ್ಲಿ ಇನ್ನೂ ಹಲವು ನಾಯಕರಿದ್ದಾರೆ. ಅವರ ಬೆಂಬಲದೊಂದಿಗೆ ಲ್ಯಾಥಮ್ ಉತ್ತಮವಾಗಿ ತಂಡ ಮುನ್ನಡೆಸಲಿದ್ದಾರೆ" ಎಂದು ಗ್ಯಾರಿ ಹೇಳಿದ್ದಾರೆ.

ABOUT THE AUTHOR

...view details