ಮೌಂಟ್ ಮೌಂಗನುಯಿ :ಐಸಿಸಿ ಪುರುಷರ ಟೆಸ್ಟ್ ಪ್ಲೇಯರ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ರನ್ನು ಹಿಂದಿಕ್ಕಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅಗ್ರಸ್ಥಾನಕ್ಕೇರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಐಸಿಸಿ ವಿಶ್ವ ಟೆಸ್ಟ್ ಶ್ರೇಯಾಂಕದಲ್ಲಿ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಭಾರತದ ವಿರಾಟ್ ಕೊಹ್ಲಿ ಹಿಂದಿಕ್ಕುವುದು ಆಹ್ಲಾದಕರವಾಗಿದೆ ಎಂದು ತಿಳಿಸಿದ್ದಾರೆ.
ಐಸಿಸಿ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ. ಅದರಲ್ಲಿ ವಿಲಿಯಮ್ಸನ್, "ಈ ಇಬ್ಬರು ಆಟಗಾರರು (ಕೊಹ್ಲಿ ಮತ್ತು ಸ್ಮಿತ್) ಅತ್ಯುತ್ತಮರು. ಅವರಿಗಿಂತ ಮುಂದೆ ಹೋಗುವುದು ನನಗೆ ಆಶ್ಚರ್ಯಕರ ಮತ್ತು ಸಂತಸ ತಂದಿದೆ. ಈ ಆಟಗಾರರು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದಾರೆ" ಎಂದೂ ಇದೇ ವೇಳೆ ಅವರು ಗುಣಗಾನ ಮಾಡಿದ್ದಾರೆ.