ಕರ್ನಾಟಕ

karnataka

ETV Bharat / sports

ಉಮರ್​ ನಿಷೇಧ ಕಡಿತದ ವಿರುದ್ಧ ಮೇಲ್ಮನವಿ: ಪಿಸಿಬಿ ವಿರುದ್ಧ ಕಿಡಿಕಾರಿದ ಕಮ್ರನ್​ ಅಕ್ಮಲ್​ - ಕಮ್ರನ್​ ಅಕ್ಮಲ್​

ಅಕ್ಮಲ್​ ಪ್ರಕರಣವನ್ನು ವಿಚಾರಣೆ ನಡೆಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ ಸ್ವತಂತ್ರ ತೀರ್ಪುಗಾರ ಸಮಿತಿ ರಚಿಸಿತ್ತು. ಕಳೆದ ತಿಂಗಳು ಈ ಪ್ರಕರಣದ ವಿಚಾರಣೆ ನಡೆಸಿದ್ದ ಮಾಜಿ ನ್ಯಾಯಾಧೀಶ ಫಕೀರ್ ಮೊಹಮ್ಮದ್​ ಖೋಕರ್,​​ ಉಮರ್​ ಅಕ್ಮಲ್​ ಅವರ ನಿಷೇಧದ ಶಿಕ್ಷೆಯ ಅವಧಿಯನ್ನು 3 ವರ್ಷಗಳ ಬದಲಾಗಿ 18 ತಿಂಗಳ ಅವಧಿಗೆ ಇಳಿಸಿತ್ತು.

ಉಮರ್​ ಅಕ್ಮಲ್
ಕಮ್ರನ್​ ಅಕ್ಮಲ್​

By

Published : Aug 11, 2020, 6:57 PM IST

ಕರಾಚಿ: ಉಮರ್​ ಅಕ್ಮಲ್​ ಮೇಲಿನ ನಿಷೇಧವನ್ನು ಕಡಿಮೆ ಮಾಡಿರುವ ತೀರ್ಪಿನ ವಿರುದ್ಧ ಪಿಸಿಬಿ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಿರುವುದಕ್ಕೆ ಉಮರ್​ ಸಹೋದರ ಕಮ್ರನ್​ ಅಕ್ಮಲ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ಮಲ್​ ಪ್ರಕರಣವನ್ನು ವಿಚಾರಣೆ ನಡೆಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ ಸ್ವತಂತ್ರ ತೀರ್ಪುಗಾರ ಸಮಿತಿ ರಚಿಸಿತ್ತು. ಕಳೆದ ತಿಂಗಳು ಈ ಪ್ರಕರಣದ ವಿಚಾರಣೆ ನಡೆಸಿದ್ದ ಮಾಜಿ ನ್ಯಾಯಾಧೀಶ ಫಕೀರ್ ಮೊಹಮ್ಮದ್​ ಖೋಕರ್ ಅವರು​ ಉಮರ್​ ಅಕ್ಮಲ್​ ನಿಷೇಧದ ಶಿಕ್ಷೆಯ ಅವಧಿಯನ್ನು 3 ವರ್ಷಗಳ ಬದಲಾಗಿ 18 ತಿಂಗಳ ಅವಧಿಗೆ ಇಳಿಸಿದ್ದರು.

ಪಿಸಿಬಿ ಭ್ರಷ್ಟಾಚಾರ ಮುಕ್ತಗೊಳಿಸುವ ದೃಷ್ಟಿಯಿಂದ ಉಮರ್​ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸ್ವತಂತ್ರ ತೀರ್ಪುಗಾರ ಸಮಿತಿ ನೀಡಿರುವ ತೀರ್ಪು ಬೋರ್ಡ್​ಗೆ ಸಮಾಧಾನವೆನಿಸಿಲ್ಲ. ಹಾಗಾಗಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಪಿಸಿಬಿ ತಿಳಿಸಿತ್ತು.

ಆದರೆ ಪಿಸಿಬಿ ನಿರ್ಧಾರವನ್ನು ಖಂಡಿಸಿರುವ ಕಮ್ರನ್​ ಅಕ್ಮಲ್​, ಈ ಹಿಂದೆ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದವರಿಗೆ ಶಿಕ್ಷೆಯ ಪ್ರಮಾಣವನ್ನು 3 ವರ್ಷಗಳಿಂದ 6 ತಿಂಗಳಿಗೆ ಕಡಿಮೆ ಮಾಡಲಾಗಿತ್ತು. ಅದೇ ರೀತಿ ಅವರ ದಂಡದ ಪ್ರಮಾಣವನ್ನು ಕೂಡ ಕಡಿತಗೊಳಿಸಲಾಗಿದೆ. ಆದರೆ ಉಮರ್ ಅಕ್ಮಲ್​ಗೆ 18 ತಿಂಗಳವರೆಗೆ ನಿಷೇಧದಲ್ಲಿರುವುದು ಕೂಡ ಪಿಸಿಬಿಗೆ ತೃಪ್ತಿಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರದಲ್ಲಿ ಉಮರ್​ಗೆ ತುಂಬಾ ಅನ್ಯಾಯವಾಗುತ್ತಿದೆ. ಅವರು ಹಲವಾರು ಅಧಿಕಾರಿಗಳೊಂದಿಗೆ ಬುಕ್ಕಿಗಳು ತಮ್ಮನ್ನು ಸಂಪರ್ಕಿಸಿದ್ದ ವಿಚಾರವನ್ನು ತಿಳಿಸಿದ್ದರು. ಆದರ ಒಮ್ಮೆ ಮಾತ್ರ ತಿಳಿಸಿರಲಿಲ್ಲ ಎಂದು ಅವನೇ ಒಪ್ಪಿಕೊಂಡಿದ್ದಾನೆ. ಈಗಾಗಲೇ 18 ತಿಂಗಳ ನಿಷೇಧವೇ ಆತನಿಗೆ ಹೆಚ್ಚಾಗಿದೆ ಎಂದು ಅವರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

ABOUT THE AUTHOR

...view details