ಲಾಹೋರ್: ಪಾಕ್ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಟಿ20 ಕ್ರಿಕೆಟ್‌ನಲ್ಲಿ 100 ಸ್ಟಂಪ್ ಮಾಡಿದ ಮೊದಲ ವಿಕೆಟ್‌ಕೀಪರ್ ಎಂಬ ಸಾಧನೆ ಮಾಡಿದ್ದಾರೆ.
ದಕ್ಷಿಣ ಪಂಜಾಬ್ ವಿರುದ್ಧ ಮಂಗಳವಾರ ನಡೆದ ರಾಷ್ಟ್ರೀಯ ಟಿ20 ಕಪ್ ಪಂದ್ಯದ ವೇಳೆ ಸೆಂಟ್ರಲ್ ಪಂಜಾಬ್ ಪರ ಕೀಪಿಂಗ್ ಮಾಡುತ್ತಿದ್ದ ಅಕ್ಮಲ್ ಈ ದಾಖಲೆ ಬರೆದಿದ್ದಾರೆ.
"ಟಿ20 ಕ್ರಿಕೆಟ್‌ನಲ್ಲಿ 100 ಸ್ಟಂಪಿಂಗ್ ದಾಖಲಿಸಿದ ಮೊದಲ ವಿಕೆಟ್‌ಕೀಪರ್ ಅಕ್ಮಲ್ ಅವರ ಅದ್ಭುತ ಸಾಧನೆಗೆ ಅಭಿನಂದನೆಗಳು" ಎಂದು ಪಾಕಿಸ್ತಾನ ಕ್ರಿಕೆಟ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಟಿ20 ಕ್ರಿಕೆಟ್‌ನಲ್ಲಿ 84 ಸ್ಟಂಪಿಂಗ್ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ಮಾಜಿ ನಾಯಕ ಕುಮಾರ್ ಸಂಗಕ್ಕಾರ 60 ಸ್ಟಂಪಿಂಗ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ದಿನೇಶ್ ಕಾರ್ತಿಕ್ (59) ಮತ್ತು ಅಫ್ಘಾನಿಸ್ತಾನದ ಮೊಹಮ್ಮದ್ ಶಹಜಾದ್ (52) ನಂತರದ ಸ್ಥಾನದಲ್ಲಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಧೋನಿ 98 ಪಂದ್ಯಗಳಲ್ಲಿ 34 ಸ್ಟಂಪಿಂಗ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ಪರ 58 ಪಂದ್ಯಗಳಲ್ಲಿ 32 ಸ್ಟಂಪಿಂಗ್‌ಗಳನ್ನು ಹೊಂದಿರುವ ಅಕ್ಮಲ್ ಎರಡನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶದ ಮುಶ್ಫಿಕರ್ ರಹೀಮ್ (29), ಶಹಜಾದ್ (28) ಮತ್ತು ಸಂಗಕ್ಕಾರ (20) ನಂತರದ ಸ್ಥಾನದಲ್ಲಿದ್ದಾರೆ.