ಕರ್ನಾಟಕ

karnataka

ETV Bharat / sports

ಲಂಕಾ ಪ್ರವಾಸಕ್ಕಾಗಿ ಇಂಗ್ಲೆಂಡ್ ಬ್ಯಾಟಿಂಗ್ ಸಲಹೆಗಾರರಾಗಿ ಜಾಕ್​ ಕಾಲಿಸ್ ನೇಮಕ - ಇಂಗ್ಲೆಂಡ್-ಶ್ರೀಲಂಕಾ ಟೆಸ್ಟ್ ಪಂದ್ಯ

ಜಾಕ್ ಕಾಲಿಸ್ ಅವರನ್ನು ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಇಂಗ್ಲೆಂಡ್-ಶ್ರೀಲಂಕಾ ಎರಡೂ ಟೆಸ್ಟ್‌ ಪಂದ್ಯಗಳು ಜನವರಿ 14-18 ಮತ್ತು ಜನವರಿ 22-26ರಂದು ಗ್ಯಾಲಿಯಲ್ಲಿ ನಡೆಯಲಿವೆ.

kallis
kallis

By

Published : Dec 21, 2020, 7:45 PM IST

ಲಂಡನ್:ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ಆಟಗಾರ ಜಾಕ್ ಕಾಲಿಸ್ ಅವರನ್ನು ಮುಂದಿನ ತಿಂಗಳು ಶ್ರೀಲಂಕಾದ ಎರಡು ಪಂದ್ಯಗಳ ಟೆಸ್ಟ್ ಪ್ರವಾಸಕ್ಕಾಗಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.

ಜನವರಿ 2ರಂದು ಇಂಗ್ಲೆಂಡ್ ಕ್ರಿಕೆಟ್ ತಂಡವು ಶ್ರೀಲಂಕಾಗೆ ತೆರಳಲಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಪ್ರಕಟಣೆಯಲ್ಲಿ ತಿಳಿಸಿದೆ.

"ಎರಡು ಟೆಸ್ಟ್ ಪಂದ್ಯದ ಪ್ರವಾಸಕ್ಕಾಗಿ ಏಳು ತರಬೇತುದಾರರು ತಂಡವನ್ನು ಸೇರಿಕೊಳ್ಳಲಿದ್ದು, ತಂಡವು ಜನವರಿ 2ರಂದು ನಿರ್ಗಮಿಸಲಿದೆ" ಎಂದು ಇಸಿಬಿ ತಿಳಿಸಿದೆ.

"ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜಾಕ್ ಕಾಲಿಸ್ ಅವರು ಬ್ಯಾಟಿಂಗ್ ಸಲಹೆಗಾರರಾಗಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡ ಸೇರುತ್ತಾರೆ" ಎಂದು ಇಸಿಬಿ ಹೇಳಿದೆ.

45 ವರ್ಷದ ಕಾಲಿಸ್ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದೊಂದಿಗೆ ಇದೇ ರೀತಿಯ ಪಾತ್ರ ನಿರ್ವಹಿಸಿದ್ದರು. ಇಂಗ್ಲೆಂಡ್-ಶ್ರೀಲಂಕಾ ಎರಡೂ ಟೆಸ್ಟ್ ಪಂದ್ಯಗಳು ಜನವರಿ 14-18 ಮತ್ತು ಜನವರಿ 22-26ರಂದು ಗ್ಯಾಲಿಯಲ್ಲಿ ನಡೆಯಲಿವೆ.

ABOUT THE AUTHOR

...view details