ಕರ್ನಾಟಕ

karnataka

ETV Bharat / sports

ಸತತ 20ನೇ ಪಂದ್ಯದಲ್ಲಿ ವಿಕೆಟ್​ ಪಡೆಯುವಲ್ಲಿ ಯಶಸ್ವಿ: ದಾಖಲೆ ಬರೆದ ರಬಾಡ - R vinay kumar

ರಬಾಡ ಐಪಿಎಲ್​ನಲ್ಲಿ ಸತತ 20 ಪಂದ್ಯಗಳಲ್ಲಿ ಕಡಿಮೆ ಅಂದರೂ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕನ್ನಡಿಗ ಆರ್​ ವಿನಯ್ ಕುಮಾರ್​ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ವಿನಯಕುಮಾರ್ ಸತತ 19 ಪಂದ್ಯಗಳಲ್ಲಿ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಕಗಿಸೋ ರಬಾಡ
ಕಗಿಸೋ ರಬಾಡ

By

Published : Oct 10, 2020, 6:58 PM IST

ಶಾರ್ಜಾ:ಶುಕ್ರವಾರ ನಡೆದ ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್​ ತಂಡ 46 ರನ್​ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ 3 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದ ಡೆಲ್ಲಿ ತಂಡದ ರಬಾಡ ಮಹತ್ವದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.

ರಬಾಡ ಐಪಿಎಲ್​ನಲ್ಲಿ ಸತತ 20 ಪಂದ್ಯಗಳಲ್ಲಿ ಕಡಿಮೆ ಅಂದರೂ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕನ್ನಡಿಗ ಆರ್​.ವಿನಯ್ ಕುಮಾರ್​ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ವಿನಯಕುಮಾರ್ ಸತತ 19 ಪಂದ್ಯಗಳಲ್ಲಿ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಮೊದಲ ಸ್ಥಾನದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆಲ್​ರೌಂಡರ್ ಡ್ವೇನ್ ಬ್ರಾವೋ ಇದ್ದಾರೆ. ಅವರು 2012ರಿಂದ 2017ರವರೆಗೆ ಐಪಿಎಲ್​ನಲ್ಲಿ 27 ಪಂದ್ಯಗಳಲ್ಲಿ ಕನಿಷ್ಠ ಒಂದು ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಪ್ರಸ್ತುತ 2020ರ ಐಪಿಎಲ್​ನಲ್ಲಿ ರಬಾಡ ಕೇವಲ 6 ‌ಪಂದ್ಯಗಳಲ್ಲಿ 15 ವಿಕೆಟ್‌ ಪಡೆದು ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ABOUT THE AUTHOR

...view details