ಕರ್ನಾಟಕ

karnataka

ETV Bharat / sports

ಸುರೇಶ್​ ರೈನಾ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಹೆಸರಿಸಿದ ಕೆ.ಶ್ರೀಕಾಂತ್ - ಐಪಿಎಲ್ 2020

ಒಟ್ಟಾರೆ 8 ಬಾರಿ ಫೈನಲ್​ ಪ್ರವೇಶಿಸಿರುವ ಸಿಎಸ್​ಕೆ ಮೂರು ಬಾರಿಯ ಚಾಂಪಿಯನ್ ಹಾಗೂ 5 ಬಾರಿ ರನ್ನರ್​ ಅಪ್​​ ಆಗಿದೆ. ಆದರೆ 13ನೇ ಆವೃತ್ತಿಯಲ್ಲಿ ರೈನಾ ಹಿನ್ನಡೆ ಸಿಎಸ್​ಕೆಗೆ ದೊಡ್ಡ ಹಿನ್ನಡೆಯಾಗಲಿದೆ ಎನ್ನುವ ವಿಚಾರಕ್ಕೆಮಾತನಾಡಿರು ಭಾರತ ತಂಡದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ರೈನಾ ಗೈರು ಸಿಎಸ್​ಕೆ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಾಗಲಾರದು. ಈ ಬಾರಿಯೂ ಟೂರ್ನಿಯ ಟಾಪ್ 4 ತಂಡಗಳಲ್ಲಿ ಸಿಎಸ್‌ಕೆ ಕೂಡ ಇರಲಿದೆ ಎಂದಿದ್ದಾರೆ.

ಸುರೇಶ್​ ರೈನಾ
ಸುರೇಶ್​ ರೈನಾ

By

Published : Sep 13, 2020, 6:46 PM IST

ಚೆನ್ನೈ:ಮಿಸ್ಟರ್​ ಐಪಿಎಲ್ ಖ್ಯಾತಿಯ ಸುರೇಶ್​ ರೈನಾ ವೈಯಕ್ತಿಕ ಕಾರಣ ನೀಡಿ ಐಪಿಎಲ್​ನಿಂದ ದೂರ ಉಳಿದಿದ್ದಾರೆ. ತಂಡದ ಪ್ರಮುಖ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿದ್ದ ರೈನಾ ತಂಡದಿಂದ ಹೊರಬಂದಿರುವುದು ಸಿಎಸ್​ಕೆಗೆ ಪ್ರದರ್ಶನದ ಮೇಲೆ ಪರಿಣಾಮ ಬೀರದು, ಈ ಬಾರಿಯೂ ಧೋನಿ ನೇತೃತ್ವದ ತಂಡ ಪ್ಲೇ ಆಫ್​ ತಲುಪಲಿದೆ ಎಂದು ಕೆ.ಶ್ರೀಕಾಂತ್​ ಅಭಿಪ್ರಾಯ ಪಟ್ಟಿದ್ದಾರೆ.

ಒಟ್ಟಾರೆ 8 ಬಾರಿ ಫೈನಲ್​ ಪ್ರವೇಶಿಸಿರುವ ಸಿಎಸ್​ಕೆ ಮೂರು ಬಾರಿಯ ಚಾಂಪಿಯನ್ ಹಾಗೂ 5 ಬಾರಿ ರನ್ನರ್​ ಅಪ್​​ ಆಗಿದೆ. ಆದರೆ 13ನೇ ಆವೃತ್ತಿಯಲ್ಲಿ ರೈನಾ ಹಿನ್ನಡೆ ಸಿಎಸ್​ಕೆಗೆ ದೊಡ್ಡ ಹಿನ್ನಡೆಯಾಗಲಿದೆ ಎನ್ನುವ ವಿಚಾರಕ್ಕೆಮಾತನಾಡಿರು ಭಾರತ ತಂಡದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ರೈನಾ ಗೈರು ಸಿಎಸ್​ಕೆ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಾಗಲಾರದು. ಈ ಬಾರಿಯೂ ಟೂರ್ನಿಯ ಟಾಪ್ 4 ತಂಡಗಳಲ್ಲಿ ಸಿಎಸ್‌ಕೆ ಕೂಡ ಇರಲಿದೆ ಎಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರೈನಾ ಅವರ ಗೈರು ಖಂಡಿತ ಕಾಡಲಿದೆ. ಏಕೆಂದರೆ ಅವರು ಬ್ಯಾಟ್ಸ್​ಮನ್​, ಉತ್ತಮ ಫೀಲ್ಡರ್​ ಹಾಗೂ ಅರೆಕಾಳಿಕ ಸ್ಪಿನ್ನರ್​ ಆಗಿದ್ದಲ್ಲದೆ ತಂಡದ ಉಪನಾಯಕನಾಗಿಯೂ ಧೋನಿಗೆ ನೆರವಾಗುತ್ತಿದ್ದರು. ಆದರೂ ನಾಯಕ ಧೋನಿ ಇಂತಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನಿಸ್ಸೀಮರಾಗಿದ್ದಾರೆ. ಖಂಡಿತವಾಗಿಯೂ ಸಿಎಸ್​ಕೆ ಮತ್ತೊಂದು ಬಾರಿ ಫ್ಲೇ ಆಪ್​ಗೆ ತಲುಪಲಿದೆ ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ರೈನಾ ಅಲಭ್ಯತೆ ಮುರುಳಿ ವಿಜಯ್​ಗೆ ಟಿ20 ಕ್ರಿಕೆಟ್​ನಲ್ಲಿ ಉಳಿದುಕೊಳ್ಳಲು ಅದ್ಭುತ ಅವಕಾಶ ಎಂದಿದ್ದಾರೆ. ಭಾರತ ತಂಡದಿಂದ ಎಲ್ಲಾ ಮಾದರಿಯ ಕ್ರಿಕೆಟ್​ನಿಂದಲೂ ಹೊರಬಿದ್ದಿರುವ ವಿಜಯ್​ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇನ್ನುವಿಜಯ್ ಅನುಭವಿ ಶೇನ್​ ವಾಟ್ಸನ್​ ಜೊತೆ ಇನ್ನಿಂಗ್ಸ್​ ಆರಂಭಿಸಿದರೆ ತಂಡಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.

ABOUT THE AUTHOR

...view details