ಜಮ್ಮು: ಮೊದಲೆರಡು ದಿನ ಮಳೆಗಾಹುತಿಯಾದರೂ ಉಳಿದ ಮೂರು ದಿನಗಳ ಆಟದಲ್ಲೇ ಜಮ್ಮು-ಕಾಶ್ಮೀರ ತಂಡವನ್ನು 167 ರನ್ಗಳಿಂದ ಬಗ್ಗುಬಡಿದ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಭಾನುವಾರ 4 ವಿಕೆಟ್ ಕಳೆದುಕೊಂಡು 245 ರನ್ಗಳಿಸಿದ್ದ ಕರ್ನಾಟಕ 5ನೇ ದಿನ 316 ರನ್ಗಳಿಸಿ ಆಲೌಟ್ ಆಯಿತು. 75 ರನ್ಗಳಿಸಿದ್ದ ಸಿದ್ದಾರ್ಥ್ ಇಂದು 98 ರನ್ಗಳಿಸಿ ಔಟಾಗುವ ಮೂಲಕ ಎರಡು ರನ್ ನಿಂದ ಶತಕ ವಂಚಿತರಾದರು. ಶರತ್ 34 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಜಮ್ಮ-ಕಾಶ್ಮೀರ ತಂಡದ ಅಬಿದ್ ಮುಷ್ತಾಕ್ 6 ವಿಕೆಟ್ ಹಾಗೂ ನಾಯಕ ಪರ್ವೇಜ್ ರಸೂಲ್ 3 ವಿಕೆಟ್ ಪಡೆದರು.
331 ರನ್ಗಳ ಟಾರ್ಗೆಟ್ ಪಡೆದಿದ್ದ ಜಮ್ಮು-ಕಾಶ್ಮೀರ ಕೆ.ಗೌತಮ್ ದಾಳಿಗೆ ಸಿಲುಕಿ ಕೇವಲ 163 ರನ್ಗಳಿಗೆ ಆಲೌಟ್ ಆಗುವ ಮೂಲಕ 167 ರನ್ಗಳ ಸೋಲುಕಂಡಿತು. ಆರಂಭಿಕ ಬ್ಯಾಟ್ಸ್ಮನ್ ಶುಭಮ್ ಖಜುರಿಯಾ 30, ಶುಭಮ್ ಪಂಡಿರ್ 31, ಅಕ್ಯುಬ್ ನಬಿ 26 ರನ್ಗಳಿಸಿದರು.
ಕೆ ಗೌತಮ್ 18.4 ಓವರ್ಗಳಲ್ಲಿ 54 ರನ್ ನೀಡಿ 7 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಪ್ರಸಿದ್ ಕೃಷ್ಣ, ರೋನಿತ್ ಮೋರೆ ಹಾಗೂ ಸುಚಿತ್ ತಲಾ ಒಂದು ವಿಕೆಟ್ ಪಡೆದು ಗೌತಮ್ಗೆ ಸಾಥ್ ನೀಡಿದರು.
ಕರ್ನಾಟಕ ತಂಡ ಸೆಮಿಫೈನಲ್ನಲ್ಲಿ ಬೆಂಗಾಲ್ ತಂಡದ ವಿರುದ್ಧ ಹಾಗೂ ಗುಜರಾತ್ ಸೌರಾಷ್ಟ್ರದ ವಿರುದ್ಧ ಸೆಣಸಾಡಲಿವೆ.