ಬ್ರಿಸ್ಬೇನ್: ಐಪಿಎಲ್ ಟೂರ್ನಿಯನ್ನು ಪ್ರೀತಿಸುವ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್, ಕಳೆದ ವರ್ಷದ ಆವೃತ್ತಿಯ ಸಮಯವನ್ನು ಪ್ರಶ್ನಿಸಿದ್ದು, ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹಲವು ಆಟಗಾರರು ಗಾಯಗೊಂಡಿರುವುದಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಕಾರಣ ಎಂದಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ 2020 ರ ಸೆಪ್ಟೆಂಬರ್-ನವೆಂಬರ್ ಸಮಯದಲ್ಲಿ ಐಪಿಎಲ್ ನಡೆಯಿತು. ಈ ಪಂದ್ಯಾವಳಿಯನ್ನು ಸಾಮಾನ್ಯವಾಗಿ ಭಾರತದಲ್ಲಿ ಏಪ್ರಿಲ್-ಮೇ ವೇಳೆಗೆ ನಡೆಸಲಾಗುತ್ತದೆ.
ಈ ಬೇಸಿಗೆಯಲ್ಲಿ ಎಷ್ಟು ಆಟಗಾರರಿಗೆ ಗಾಯಗಳು ಸಂಭವಿಸಿವೆ ಎಂಬುದು ನಿಜಕ್ಕೂ ಕುತೂಹಲಕಾರಿಯಾಗಿದೆ. ಈ ವರ್ಷ (2020) ರಲ್ಲಿ ಐಪಿಎಲ್ ಟೂರ್ನಿ ನಡೆಯುತ್ತದೆ ಎಂದು ನಾನು ಯೋಚಿಸಿರಲಿಲ್ಲ. ಬಹುಶಃ ಟೂರ್ನಿ ನಡೆದ ಸಮಯ ಯಾರಿಗೂ ಸೂಕ್ತವಾಗಿರಲಿಲ್ಲ. ಖಂಡಿತವಾಗಿಯೂ ಇಂತಹ ದೊಡ್ಡ ಸರಣಿಯ ದೃಷ್ಟಿಯಿಂದಲೂ ಸೂಕ್ತವಾಗಿರಲಿಲ್ಲ ಎಂದು ಲ್ಯಾಂಗರ್ ಹೇಳಿದ್ದಾರೆ.
ಟೀಂ ಇಂಡಿಯಾ ಗಾಯಾಳುಗಳ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಎಂದರೆ ಹೆಬ್ಬೆರಳಿಗೆ ಪೆಟ್ಟು ಬಿದ್ದ ರವೀಂದ್ರ ಜಡೇಜಾ ಮತ್ತು ಕಿಬ್ಬೊಟ್ಟೆಯ ಒತ್ತಡಕ್ಕೆ ಒಳಗಾಗಿರುವ ವೇಗಿ ಜಸ್ಪ್ರಿತ್ ಬುಮ್ರಾ. ಇದಕ್ಕೂ ಮುನ್ನ ಕೆ.ಎಲ್. ರಾಹುಲ್, ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಅವರು ವಿವಿಧ ಗಾಯಗಳಿಂದಾಗಿ ಸರಣಿಯಿಂದ ಹೊರಗುಳಿದಿದ್ದರು.
"ನಾನು ಐಪಿಎಲ್ ಅನ್ನು ಪ್ರೀತಿಸುತ್ತೇನೆ, ಕೌಂಟಿ ಕ್ರಿಕೆಟ್ ಅನ್ನು ನೋಡುವಂತೆಯೇ ಐಪಿಎಲ್ ಅನ್ನು ನೋಡುತ್ತೇನೆ. ಯುವ ಆಟಗಾರರು ಕೌಂಟಿ ಕ್ರಿಕೆಟ್ ಆಡುತ್ತಾರೆ ಮತ್ತು ಇದು ಅವರ ಕ್ರಿಕೆಟ್ ಅಭಿವೃದ್ಧಿಗೆ ಅಗಾಧವಾಗಿ ಸಹಾಯ ಮಾಡುತ್ತದೆ. ಆದರೆ ಕೋವಿಡ್ ಪರಿಸ್ಥಿತಿಯಲ್ಲಿ ಟೂರ್ನಿ ನಡೆದ ಸಮಯ ಉತ್ತಮವಾಗಿರಲಿಲ್ಲ ಎನಿಸುತ್ತದೆ. ಬೇಸಿಗೆಯ ಉದ್ದಕ್ಕೂ ಎರಡೂ ತಂಡಗಳ ಆಟಗಾರರಿಗೆ ಆಗುತ್ತಿರುವ ಗಾಯಗಳ ಮೇಲೆ ಅದು ಪರಿಣಾಮ ಬೀರುತ್ತಿದೆಯೆ ಎಂದು ನಾನು ಆಶ್ಚರ್ಯ ಪಡುತ್ತೇನೆ ಎಂದಿದ್ದಾರೆ.
-------------
Brisbane: He loves the IPL but Australia coach Justin Langer on Wednesday questioned the timing of the last year's edition, which he believes could have been a contributing factor in the injury setbacks that both his and the Indian team have endured in the ongoing series.
The IPL was held in the September-November window in 2020 in the United Arab Emirates due to the COVID-19 pandemic. The lucrative tournament is usually held in India during the April-May window.
India have had a spate of injuries since the IPL and also in the current Australia series. Australia too had its share of injuries.
"It is really interesting how many injuries (it) has been throughout this summer. I can't help and think that the IPL this year (2020) was in really, probably wasn't ideal timing for anyone, certainly for such a big series like this," Langer said at a virtual press conference.
The latest addition to the Indian injury list is Ravindra Jadeja, who was hit on his thumb, and pace spearhead Jasprit Bumrah, who has been ruled out of the last Test following an abdominal strain.